ಭಾರತ ಮೂಲ ವಿದ್ಯಾರ್ಥಿಗೆ ಜೈಲು

ವಾಷಿಂಗ್ಟನ್, ಆ. ೧೪- ಉದ್ದೇಶಪೂರ್ವಕವಾಗಿ ಕಾಲೇಜಿನ ಕಂಪ್ಯೂಟರ್ ಹಾನಿಗೊಳಿಸಿದ ಭಾರತೀಯ ಮೂಲದ ವಿದ್ಯಾರ್ಥಿಗೆ ನ್ಯಾಯಾಲಯ ೧ ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಶಿಕ್ಷೆಗೊಳಗಾದ ಭಾರತ ಮೂಲದ ವಿದ್ಯಾರ್ಥಿಯನ್ನು ವಿಶ್ವನಾಥ್ ಅಕುತೋಟ ಎಂದು ಗುರುತಿಸಲಾಗಿದ್ದು, ೧೨ ತಿಂಗಳ ಕಾರಾಗೃಹ ಶಿಕ್ಷೆಯೊಂದಿಗೆ ೫೮.೪೭೧ ಡಾಲರ್‌ನ್ನು ದಂಡವಾಗಿ ವಿಧಿಸಿದೆ. ಈ ವಿಷಯವನ್ನು ಅಮೆರಿಕಾದ ಅಟರ್ನಿಕ್ ಗ್ರಾಂಟ್ ಜೆಕ್ಯೂತ್ ತಿಳಿಸಿದ್ದಾರೆ.
ಕಳೆದ ಫೆ. ೧೪ ರಂದು ಯುಎಸ್‌ಬಿ ಕಿಲ್ಲರ್ ಎನ್ನುವ ಸಾಧನವನ್ನು ೬೬ ಕಂಪ್ಯೂಟರ್‌ಗಳಿಗೆ ವಿದ್ಯಾರ್ಥಿ ಅಕುತೋಟ ಅಳವಡಿಸಿದ್ದನು ಹಾಗೂ ಅನೇಕ ಕಂಪ್ಯೂಟರ್ ಮಾನಿಟರ್‌ಗಳಲ್ಲಿ ಪೋಡಿಯಂನ್ನೂ ಸಹ ಒಳ ತೂರಿಸಿದ್ದನು ಎಂದು ಕಾಲೇಜಿನ ಆಡಳಿತ ತಿಳಿಸಿದೆ.
ವಿದ್ಯಾರ್ಥಿ ಅಕುತೋಟ ಅಳವಡಿಸಿದ್ದ ಈ ಸಾಧನದಿಂದ ಕಾಲೇಜಿನ ಕಂಪ್ಯೂಟರ್‌ಗಳಲ್ಲಿ ಮತ್ತೆ ಮತ್ತೆ ರಿಚಾರ್ಜ್ ಮಾಡಲು ಸೂಚಿಸಲಾಗುತ್ತಿತ್ತು ಹಾಗೂ ಕಂಪ್ಯೂಟರ್‌ಗಳ ಸಂಪರ್ಕ ಕಡಿತಗೊಳ್ಳುತ್ತಿತ್ತು. ಇದರಿಂದ ಕಂಪ್ಯೂಟರ್‌ಗಳಿಗೆ ಹಾಗೂ ಎಲೆಕ್ಟ್ರಾನಿಕ್ ವ್ಯವಸ್ಥೆಗೆ ಹಾನಿಯಾಗಿತ್ತು ಎಂದು ತಿಳಿಸಿದ್ದಾರೆ.
ಭಾರತೀಯ ಮೂಲದ ವಿದ್ಯಾರ್ತಿ ಅಕುತೋಟ ಅಮೆರಿಕಾದಲ್ಲಿ ವಿದ್ಯಾರ್ಥಿ ವೀಸಾಪಡೆದು ನೆಲೆಸಿದ್ದರು. ಕಳೆದ ಫೆ. ೨೨ರಿಂದಲೂ ಈತ ಉತ್ತರ ಕರೋಲೊನಿಯಾ ಪೊಲೀಸರ ವಶದಲ್ಲಿದ್ದ ಎನ್ನಲಾಗಿದೆ.

Leave a Comment