ಭಾರತ-ಬಾಂಗ್ಲಾ ಸೆಣಸು ಚಾರಿತ್ರಿಕ ಪಿಂಕ್ ಬಾಲ್ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಚಾಲನೆ

 

ಕೊಲ್ಕತ್ತಾ, ನ ೨೨-ಭಾರತ=ಬಾಂಗ್ಲಾದೇಶಗಳ ನಡುವಣ ಚಾರಿತ್ರಿಕ ಪಿಂಕ್ ಬಾಲ್ ಹಗಲು ರಾತ್ರಿ ಪಂದ್ಯ ಕೊಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಟಾಸ್ ಗೆದ್ದ ಪ್ರವಾಸಿ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.  ಈಗಾಗಲೇ ಭಾರತ ೧-೦ಯಿಂದ ಮನ್ನಡೆ ಪಡೆದ್ದಿದ್ದು ಸರಣಿ ಕೈ ವಶಮಾಡಿಕೊಳ್ಳುವ ತವಕದಲ್ಲಿದೆ.

ಬಾಂಗ್ಲಾದ ಆರಂಭಿಕ ಆಟಗಾರರಾದ ಶದ್ಮನ್ ಇಸ್ಲಾಂ ಹಾಗೂ ಇಮ್ರುಲ್ ಕೇಸ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ವಿಕೆಟ್ ನಷ್ಟವಿಲ್ಲದೆ  ಬಾಂಗ್ಲಾ ಒಂದು ವಿಕೆಟ್ ನಷ್ಟಕ್ಕೆ ೨೫ ರನ್ ಗಳಿಸಿದೆ. ಇಶಾಂತ್ ಶರ್ಮಾ ಬೌಲಿಂಗ್‌ನಲ್ಲಿ ಇಮ್ರುಲ್ ಎಲ್‌ಬಿ ಬಲೆಗೆ ಬಿದ್ದರು.

ಹಗಲು ರಾತ್ರಿ ಹಾಗೂ ಪಿಂಕ್ ಬಾಲ್‌ಗ ಅನುಗುಣವಾಗಿ ಭಾರತೀಯ ಅಟಗಾರರು ಕಠಿಣ ತಾಲೀಮು ನಡೆಸಿ ಅಂಗಳಕ್ಕಿಳಿದಿದ್ದಾರೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳಲ್ಲಿ ಈ ಪಂದ್ಯ ಅಪಾರ ಕುತೂಹಲ ಕೆರಳಿಸಿದೆ.

ಈ ಹೊನಲು ಬೆಳಕಿನ ಪಿಂಕ್ ಬಾಲ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳ ದಂಡೇ ಕ್ರೀಡಾಂಗಣದಲ್ಲಿ ಜಮಾಯಿಸಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ಗಣ್ಯಾತಿಗಣ್ಯರು ಈ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ.

ಭಾರತದಲ್ಲಿ ಮೊದಲ ಪಿಂಕ್ ಬಾಲ್  ಟೆಸ್ಟ್ ಪಂದ್ಯ ಆಯೋಜಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ. ಅವರು ೨೦೧೬ರಲ್ಲಿ  ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿದ್ದಾಗ  ಮೋಹನ್ ಬಗಾನ್ ಮತ್ತು ಭೋವಾನಿಪೋರ್ ತಂಡಗಳ ನಡುವಣ ಸಿಎಬಿ ಸೂಪರ್ ಲೀಗ್‌ನ ಫೈನಲ್ ಪಂದ್ಯದಲ್ಲಿ ಮೊದಲ ಬಾರಿಗೆ ಪಿಂಕ್ ಬಾಲ್ ಬಳಸಲಾಗಿತ್ತು.

ಈ ಹಿಂದೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಣ ಮೊದಲ ಬಾರಿಗೆ ನಡೆದ ಟೆಸ್ಟ್ ಪಂದ್ಯದಲ್ಲಿ ಪಿಂಕ್ ಬಾಲ್ ಬಳಸಲಾಗಿತ್ತು. ೨೦೧೫ರಲ್ಲಿ ನಡೆದ ಈ ಪಂದ್ಯವನ್ನು ಆಸ್ಟ್ರೇಲಿಯಾ ಮೂರು ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು. ಈಗ ಇದೇ ಮಾದರಿಯಲ್ಲಿ ಪ್ರತಿ ವರ್ಷ ಭಾರತದಲ್ಲೂ ಹಗಲು-ರಾತ್ರಿ ಪಂದ್ಯ ಆಯೋಜಿಸಲು ಗಂಗೂಲಿ ಗಂಭೀರ ಚಿಂತನೆ ನಡೆಸಿದ್ದಾರೆ.

ಒಟ್ಟಾರೆ ಐದು ದಿನಗಳ ನಡೆಯಲಿರುವ ಈ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.

Her Excellency Sheikh Hasina, Prime Minister of Bangladesh, , Honourable Chief Minister, West Bengal and great greet ahead of the

 

Leave a Comment