ಭಾರತ-ಪಾಕ್ ಫೈನಲ್ಸ್: ಟಿವಿ ಜಾಹೀರಾತಿಗೆ 10 ಪಟ್ಟು ಹೆಚ್ಚಿನ ದರ!

ನವದೆಹಲಿ, ಜೂ. ೧೭- ನಾಳೆ ಭಾರತ-ಪಾಕಿಸ್ತಾನಗಳ ನಡುವೆ ಲಂಡನ್ನಿನ ಕೆನ್ಸಿಂಗ್‌ಟನ್ ಓವಲ್‌ನಲ್ಲಿ ನಡೆಯಲಿರುವ ಛಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ಸ್ ಪಂದ್ಯದ ಟಿವಿ ಜಾಹೀರಾತುಗಳ ಬೆಲೆಗಳನ್ನು ಸಾಮಾನ್ಯ ದರಕ್ಕಿಂತ ಹತ್ತು ಪಟ್ಟು ಹೆಚ್ಚಿಸಲಾಗಿದೆ!

ಛಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯಂತ ಕೆಳಗಿನ ತಂಡವಾದ ಪಾಕಿಸ್ತಾನ ಸೆಮಿಫೈನಲ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದು ಅಚ್ಚರಿಯ ಫಲಿತಾಂಶ ಒದಗಿಸಿದ್ದು, ಫೈನಲ್ಸ್‌ನಲ್ಲಿ ಭಾರತವನ್ನು ಎದುರಿಸುತ್ತಿರುವುದರಿಂದಾಗಿ ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳು ಉತ್ಸಾಹದಿಂದ ಹುಚ್ಚು ಹಿಡಿದಂತಾಗಿದ್ದಾರೆ.

ರುಪಟ್ ಮರ್ಡೋಕ್ ಅವರ ಸ್ಟಾರ್ ಸ್ಪೋರ್ಟ್ಸ್ ಕ್ರೀಡಾವಾಹಿನಿ 10 ಸೆಕೆಂಡ್‌ಗಳ ಜಾಹೀರಾತಿಗೆ 1 ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಇದಕ್ಕೆ ಮುನ್ನ ಈ ದರ 10 ಲಕ್ಷ ರೂ.ಗಳಾಗಿತ್ತು ಎಂದು ಮೂಲಗಳು ತಿಳಿಸಿವೆ.

ಆದರೆ ಫೈನಲ್ಸ್ ಪಂದ್ಯಕ್ಕೆ ಬಹುತೇಕ ಜಾಹೀರಾತುಗಳಿಗೆ ನಿಸ್ಸಾನ್ ಮೋಟಾಱ್ಸ್, ಇಂಟೆಲ್ ಕೋರ್, ಎಮಿರೇಟ್ಸ್, ಓಪ್ಟೊ, ಎಂಆರ್‌ಎಫ್ ಸಂಸ್ಥೆಗಳು ಮೊದಲೇ ಕಮರ್ಷಿಯಲ್ ಪಾಲುದಾರರಾಗಿವೆ.

ಈಗ ಉಳಿದಿರುವ ಜಾಹೀರಾತು ಕಾಲಾವಧಿ ಕೇವಲ ಶೇ. 10ರಷ್ಟು ಮಾತ್ರ ಈಗ ಜಾಹೀರಾತು ಬುಕ್ ಮಾಡಬೇಕಾದರೆ ಅಂಥ ಸಂಸ್ಥೆಗಳು 10 ಪಟ್ಟು ಅಧಿಕ ದರ ತೆರಬೇಕಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಜಾಹೀರಾತು ಮ್ಯಾನೇಜರ್ ಒಬ್ಬರು ಹೇಳಿದ್ದಾರೆ.

 

Leave a Comment