ಭಾರತ ಕ್ರೀಡಾ ನೆಚ್ಚಿನ ರಾಷ್ಟ್ರವಾಗಿ ಬದಲಾಗುತ್ತಿದೆ

ಮುಂಬೈ.ಆ.25. ಭಾರತ ದೇಶ ನಿಧಾನಗತಿಯಲ್ಲಿ ಕ್ರೀಡಾ ನೆಚ್ಚಿನ ರಾಷ್ಟ್ರವಾಗಿ ಮಾರ್ಪಾಡಾಗುತ್ತಿದೆ ಎಂದು ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರತಿಯೊಬ್ಬರು ಆರೋಗ್ಯಕರ ಜೀವನ ಶೈಲಿಯೊಂದಿಗೆ ಬದುಕಬೇಕೆಂಬುದನ್ನು ಬಲವಾಗಿ ನಂಬುತ್ತೇನೆ. ಸಾಮಾನ್ಯ ಜನರು ಕೂಡ ಆಹಾರ ಸೇವಿಸುವ ವಿಚಾರದಲ್ಲಿ ತುಂಬಾ ಕಾಳಜಿ ವಹಿಸುವುದು ಅತಿ ಮುಖ್ಯ. ಇದನ್ನೂ ಪಾಲನೇ ಮಾಡಿದ್ದೆ ಆದಲ್ಲಿ ನಿಧಾನಗತಿಯಲ್ಲಿ ಕ್ರೀಡಾ ನೆಚ್ಚಿನ ದೇಶವಾಗಿ ಭಾರತ ಬದಲಾಗಲಿದೆ ಎಂದು ಸಚಿನ್‌ ಸಲಹೆ ನೀಡಿದರು.

ಮುಂಬೈನಲ್ಲಿ ಇಂದು ನಡೆದ ಮ್ಯಾರಥಾನ್‌ಗೆ ಹಸಿರು ನಿಶಾನೆ ತೋರಿದ ಬಳಿಕ ಮಾತನಾಡಿ, ” ಈ ಮ್ಯಾರಥಾನ್‌ನಲ್ಲಿ 20, 000 ಓಟಗಾರರು ಭಾಗವಹಿಸಿದ್ದಾರೆ. ಪ್ರತಿಯೊಬ್ಬರ ಜೀವನದಲ್ಲೂ ಫಿಟ್ನೆಸ್‌ ಪ್ರಧಾನ ಪಾತ್ರ ವಹಿಸುತ್ತದೆ. ಬೆಳಗ್ಗೆ ಮಳೆಯಾಗಿದ್ದರೂ ಓಟಗಾರರು ಇದನ್ನೂ ಲೆಕ್ಕಿಸದೆ ಓಟ ಮುಂದುವರಿಸಿದ್ದರು. ಇದನ್ನು ಗಮನಿಸಿದಾಗ ಮ್ಯಾರಥಾನ್ ಅನ್ನು ಜನರು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ ಎಂದು ಗೊತ್ತಾಗಲಿದೆ” ಎಂದು ಹೇಳಿದರು.

ಇತ್ತೀಚೆಗೆ ಸಚಿನ್‌ ತೆಂಡೂಲ್ಕರ್‌ ಅವರು “ಹಾಲ್‌ ಆಫ್‌ ಫೇಮ್‌” ಗೌರವಕ್ಕೆ ಭಾಜನರಾಗಿದ್ದರು.

 ಐಸಿಸಿ ಹಾಲ್‌ ಆಫ್‌ ಪೇಮ್‌ ಗೌರವಕ್ಕೆ ಭಾಜನರಾಗಿರುವುದು ಹೆಮ್ಮೆ ತಂದಿದೆ. ನನ್ನ ಕ್ರಿಕೆಟ್‌ ವೃತ್ತಿ ಜೀವನ ಸಂಪೂರ್ಣ ತೃಪ್ತಿ ತಂದಿದೆ” ಎಂದು ಸಚಿನ್‌ ಹೇಳಿದರು.

Leave a Comment