ಭಾರತೀಯ ಮೂಲದ ಭಾಷಾ ಮುಖರ್ಜಿ ಮಿಸ್ ಇಂಗ್ಲೆಂಡ್

ಲಂಡನ್, ಆ ೩ – ಭಾರತೀಯ ಮೂಲದ ೨೩ ವರ್ಷದ ಭಾಷಾ ಮುಖರ್ಜಿ ಮಿಸ್ ಇಂಗ್ಲೆಂಡ್ ಆಗಿ ಆಯ್ಕೆಗೊಂಡು ಗಮನ ಸೆಳೆದಿದ್ದಾರೆ.

ಭಾರತದಲ್ಲಿ ಜನಿಸಿದ್ದ ಭಾಷಾ ಮುಖರ್ಜಿ, ತಮ್ಮ ಒಂಬತ್ತನೆಯ ವಯಸ್ಸಿನಲ್ಲಿ ತಂದೆತಾಯಿಯೊಂದಿಗೆ ಬ್ರಿಟನ್‌ಗೆ ತೆರಳಿ ಅಲ್ಲಿಯೇ ನೆಲೆಸಿದ್ದರು, ಭಾಷಾ ಅವರು ಪ್ರಸ್ತುತ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಬಳಿಕ ಮಾತನಾಡಿದ ಅವರು ನಾವು ಬಹಳ ಮಂದಿ ಗಾಳಿಯಲ್ಲಿ ವಿಹರಿಸುತ್ತಾ ಏನೇನೊ ಕನಸು ಕಂಡು ಯಾರನ್ನೂ ಲೆಕ್ಕಕ್ಕೆ ಇಟ್ಟುಕೊಳ್ಳಬಾರದು ಎಂದುಕೊಳ್ಳುತ್ತೇವೆ. ಆದರೆ, ಸಮಯ ಬಂದಾಗ, ವಿಶಿಷ್ಟ ಸಂದರ್ಭಗಳಲ್ಲಿ ನಾವು ಎಲ್ಲರಿಗೂ ಬೆಂಬಲವಾಗಿ ನಿಂತುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ವೈದ್ಯಕೀಯ ಕಾಲೇಜಿನಲ್ಲಿದ್ದಾಗ ಮಾಡೆಲಿಂಗ್ ಆಯ್ಕೆ ಮಾಡಿಕೊಂಡೆ. ಶಿಕ್ಷಣ ಮತ್ತು ವೃತ್ತಿಜೀವನದ ನಡುವೆ ಸಮತೋಲನ ಸಾಧಿಸಲಿದ್ದೇನೆ ಎಂಬ ನಂಬಿಕೆ ಮೂಡಿದ ನಂತರ ಧೈರ್ಯದಿಂದ ಹೆಜ್ಜೆ ಮುಂದಿಟ್ಟೆ ಎಂದು ಹೇಳಿದ್ದಾರೆ. ಸರ್ಜನ್ ಆಗಿರುವ ಮುಖರ್ಜಿ ಐದು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾಳೆ. ಹಲವು ಐಕ್ಯೂ ಪರೀಕ್ಷೆಗಳಲ್ಲೂ ಜಯಗಳಿಸಿ ಜಿನಿಯಸ್ ಎಂಬ ಪ್ರಶಂಸೆಗೂ ಪಾತ್ರರಾಗಿದ್ದಾರೆ.

Leave a Comment