ಭಾರತಮಾತೆ ಮಂದಿರ ಕಳಸಾರೋಹಣ 26 ರಂದು

 

ಕಲಬುರಗಿ ಜ 22:ಅಳಂದ ತಾಲೂಕಿನ ಲಾಡ ಚಿಂಚೋಳಿ ತಾಂಡಾದಲ್ಲಿ ರಾಜ್ಯ ಹೆದ್ದಾರಿ ಪಕ್ಕ ಜೈ ಭಾರತ ಮಾತಾ ಸೇವಾ ಸಮಿತಿ ವತಿಯಿಂದ ನಿರ್ಮಿಸಲಾದ ಭಾರತಮಾತಾ ಮಂದಿರದ ಕಳಸಾರೋಹಣ ಜನವರಿ 26 ರಂದು ನಡೆಯಲಿದೆ ಎಂದು ಸಮಿತಿ ವಕ್ತಾರ ವೈಜನಾಥ ಝಳಕಿ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ನಸುಕಿನ ಜಾವ 5 ಗಂಟೆಗೆ ಭಾರತಮಾತೆಯ ವಿಧಿವತ್ತಾದ ಪೂಜೆ ನಡೆಯುವದು. ನಂತರ 7 ಗಂಟೆಗೆ ರೈತರು,ಸೈನಿಕರು,ಮಹಿಳೆಯರು,ಸ್ವಾತಂತ್ರಹೋರಾಟಗಾರರು,ಸರ್ವಧರ್ಮದ ಹಿರಿಯರ ಸಮ್ಮುಖದಲ್ಲಿ ಕಳಸಾರೋಹಣ ನಡೆಯುವದು.ನಂತರ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಗುವದು. ಇದಾದ ನಂತರ ದೇಶಭಕ್ತಿ ಮೂಡಿಸುವ ಕಾರ್ಯಕ್ರಮ ಹಾಗೂ ಮಧ್ಯಾಹ್ನ 1 ಗಂಟೆಗೆ ಸರ್ವಧರ್ಮ ಸಭೆ ಆಯೋಜಿಸಲಾಗಿದೆ.

ಜ 25 ರಂದು  ಸಂಜೆ ಮಂದಿರದ ಆವರಣದಲ್ಲಿ ದೇಶಭಕ್ತಿ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜಸ್ತಾನದಿಂದ ತರಿಸಲಾದ ಭಾರತಮಾತೆಯ ದಿವ್ಯ ಮೂರ್ತಿಯನ್ನು ದೇವಸ್ಥಾನದಲ್ಲಿ  ಪ್ರತಿಷ್ಠಾಪಿಸಲಾಗಿದ್ದು.ಆಲಯವು 31 ಅಡಿ ಎತ್ತರದ ಗೋಪುರ ಹೊಂದಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂದೇಶ ಪವಾರ,ವಿಠ್ಠಲ ಕಾಂಬಳೆ,ಖೀರು ಚವ್ಹಾಣ,ಸಂತೋಷ ಕುಮಾರ, ಲತೀಫ್ ಪಟೇಲ್, ರೇವಪ್ಪ ಉಪಸ್ಥಿತರಿದ್ದರು..

Leave a Comment