ಭಾರತದ ಹಿಂದೂ ಧರ್ಮದ ಬಗ್ಗೆ ಜಗತ್ತೇ ಮೆಚ್ಚುವಂತೆ ಮಾಡಿದವರು ವಿವೇಕಾನಂದರು

ಚಾಮರಾಜನಗರ ಸೆ.12- ಭರತಖಂಡದ ಧರ್ಮಕ್ಕೆ ಸಂಸ್ಕೃತಿಗೆ ವೀಶ್ವವೇ ಮಣಿಯುವಂತೆ ಮಾಡಿದವರು. ಸವಾಮಿ ವಿವೇಕನಂದರು ಜಗತ್ತಿಗೆಲ್ಲ ಧಾರ್ಮಿಕ ಸಹನುಭುತಿ ಗಾಗೂ ಸಾರ್ವತ್ರಿಕ ಅಂಗೀಕಾರ ಬೋದಿಸಿದ ಹಿಂದೂ ಧರ್ಮದ ಬಗ್ಗೆ ಜಗತ್ತೆ ಬೆರಗಾಗುವಂತೆ ಮತ್ತು ತಮ್ಮ ಯೋಚನಾ ಲಹರಿಉನ್ನು ಬದಲಾಯಿಸಿದ ಚಿಕಾಗೋ ಸರ್ವಧರ್ಮ ಸಮ್ಮೇಳನದ ಸುಡಿಗಳು ಅಮರವಾದದು ಎಂದು ಉಪನ್ಯಾಸಕ ರಾಷ್ಟ್ರಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್.ಋಗ್ವೇದಿ ತಿಳಿಸಿದರು.
ನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ಹಮ್ಮಿಕೊಂಡಿದ್ದ 125ನೇ ಚಿಕಾಗೋ ಸರ್ವ ಧರ್ಮ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರಗಾಗಿ ಮಾತನಾಡಿ ಭಾರತೀಯ ಸಂಸ್ಕೃತಿ, ಪರಂಪರೆಯ ಥಿಃಶಕ್ತಿಯ ಅಲೋಚನೆಯೇ ಸರ್ವಜನರ ಒಳಿತು ಹಾಗೂ ಇಡೀ ವಿಶ್ವವೇ ಒಂದು ಕುಟುಂಬ ಎಂಬ ಸಂದೇಶ ನೀಡಿದ ಭಾರತೀಯ ಸಂಸ್ಕೃತಿ ಜಗತ್ತಿಗೆ ಮಾದರಿಯಾಗಿದೆ. ಸೋದರ, ಸೋದರಿಯ ಭಾವನೆಯಿಂದ ನೋಡುವ ಗುಣ ಭಾರತೀಯರಿಗಿದೆ. ಸರ್ವ ಧರ್ಮಗಳೂ ಸತ್ಯ ಎಂದು ತಿಳಿಸಿ ಎಲ್ಲಾ ಧರ್ಮಗಳು ಅಂತಿಮವಾಗಿ ಏಕಮೇವ ಪರಮಾತ್ಮ ನಡೆಗೆ ಒಯ್ಯುವುದೆಂಬ ಆಧ್ಯಾತ್ಮಿಕ ಸತ್ಯವನ್ನಒತ್ತಿಹೇಳುವುದರ ಮೂಲಕ ವಿವೇಕನಂದರು ಇಡೀ ಜಗತ್ತೆ ಭಾರತಕ್ಕೆಗೌರವ ತರುವ ಹಾಗೇ ಮಾಡಿದವರು ಜಗತ್ತಿನ ಎಲ್ಲಾ ನಿರಾಶ್ರತರಿಗೂ ಆಶ್ರಯ ನೀಡಿದ ದೇಶ ಭಾರತ. ಭಾರತದ ಋಷಿ ಪರಂಪರೆ, ಗುರು ಹಿರಿಯರ ತಾತ್ಸಿಕ ಭಾವನೆಯ ಅಂಶಗಳನ್ನು ತಿಳಿಸಿ ಸರ್ವಧರ್ಮ ಸಮ್ಮೇಳನಕ್ಕೆ ಮರಗು ತಂದವರು ವಿವೇಕಾನಂದರುವಿಶ್ವಾತ್ಮ ಭಾವನೆ ಸತ್ಯ ಅಂಶಗಳನ್ನು ನೀಡಿ ಪೂರ್ವವು ಪಶ್ವಿಮದ ದುರ್ಗಮಕೋಟೆಗೆ ಆದ್ಯಾತ್ಮ,ತತ್ತ್ವಶಾಸ್ತ್ರದ ಮೂಲಕ ಹರಡಿಸಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ. ಯುವಶಕ್ತಿ ಸ್ವಾಮಿ ವಿವೇಕಾನಂದರ ಚಿಂತನೆ, ಇತಿಹಾಸ ಅಧ್ಯಯನ ಮಾಡಬೇಕೆಂದು ಋಗ್ವೇದಿ ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸರ್ಕಾರಿ ಪ್ರಥಮದರ್ಜೆ ಕಲೇಜಿನ ಪ್ರಾಂಶುಪಾಲರಾದ ಪ್ರೇಮಲತಾ ಚಿಕಾಗೊ ಸಂಮ್ಮೇಳನದ 125ನೇ ವರ್ಷಚರಣೆಯ ಮೂಲಕ ವಿವೇಕಾನಂದರ ಜೀವನ ತತ್ತ್ವಆದರ್ಶಗಳನ್ನು ಯುವಕರಿಗೆ ತಿಳಿಸಿ ಜಾಗೃತಿಕಾರ್ಯ ಹೆಚ್ಚಾಗ ಬೇಕೆಂದರು.
ಸ್ನಾತಕೋತ್ತರ ವಿಭಾಗದ ದೇವಾರಾಜು, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಚಲುವಯ್ಯ,ಉಪನ್ಯಾಸಕರಾದ ಚಂದ್ರಮ್ಮ, ಲೋಕೇಶ್, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ರಂಗಸ್ವಾಮಿ, ಬಸವಣ್ಣ, ರವಿಕುಮಾರ್, ಚಂದ್ರು ಉಪಸ್ಥಿತರಿದ್ದರು.

Leave a Comment