ಭಾರತದ ಸಮರ್ಥ ಉತ್ತರ: ವಿಜಯ್, ಪೂಜಾರ ಅರ್ಧ ಶತಕ

ರಾಂಚಿ, ಮಾ.೧೮- ಮುರಳಿ ವಿಜಯ್ ಹಾಗೂ ಚೇತೇಶ್ವರ್ ಪೂಜಾರ ನಡುವಣ ಉಪಯುಕ್ತ ಜೊತೆಯಾದ ನೆರವಿನಿಂದ ಭಾರತ ತಂಡದವರು ಮೂರನೇ ಕ್ರಿಕೆಟ್ ಟೆಸ್ಟ್‌ನ ಮೂರನೆಯ ದಿನವಾದ ಇಂದು ಊಟದ ಸಮಯಕ್ಕೆ ಸ್ವಲ್ಪ ಮುನ್ನ ಒಟ್ಟು ೬೬ ಓವರ್‌ಗಳಲ್ಲಿ ೧ ವಿಕೆಟ್‌ಗೆ ೧೭೩ ರನ್ ಮಾಡಿದ್ದರು.

ಆಸ್ಟ್ರೇಲಿಯಾದ ೪೫೧ ರನ್‌ಗಳಿಗೆ ಉತ್ತರವಾಗಿ ಕೆ.ಎಲ್.ರಾಹಲ್ ಅವರ ಅರ್ಧ ಶತಕದ ಮೂಲಕ ಶುಕ್ರವಾರ ೧ ವಿಕೆಟ್‌ಗೆ ೧೨೦ ರನ್ ಮಾಡಿದ್ದ ಭಾರತದ ಇನಿಂಗ್ಸ್ ಮುಂದುವರಿಸಿದ ಮುರಳಿ ವಿಜಯ್ (೧೭೧ ಎಸೆತಗಳಲ್ಲಿ ೧ ಸಿಕ್ಸರ್, ೮ ಬೌಂಡರಿಗಳಿರುವ ೭೨) ಹಾಗೂ ಚೇತೇಶ್ವರ್ ಪೂಜಾರ (೧೨೩ ಎಸೆತಗಳಲ್ಲಿ ೩ ಬೌಂಡರಿಯಿರುವ ೩೨) ಮುರಿಯದ ೨ನೇ ವಿಕೆಟ್‌ಗೆ ೮೨ ರನ್ ಸೇರಿಸಿ ಆಡುತ್ತಿದ್ದಾರೆ.

ಪ್ರಸಕ್ತ ಸರಣಿಯಲ್ಲಿ ಚೆನ್ನಾಗಿ ಆಡುತ್ತಿರುವ ಕರ್ನಾಟಕದ ಕೆ.ಎಲ್.ರಾಹುಲ್ ಶುಕ್ರವಾರ ೧೦೨ ಎಸೆತಗಳಲ್ಲಿ ೯ ಬೌಂಡರಿಗಳಿದ್ದ ೬೨ ರನ್‌ಗಳೊಡನೆ ಸರಣಿಯ ೫ ಇನಿಂಗ್ಸ್‌ಗಳಲ್ಲಿ ನಾಲ್ಕನೇ ಅರ್ಧ ಶತಕ ಗಳಿಸಿದರು.

ಸ್ಕೋರು ವಿವರ

ಆಸ್ಟ್ರೇಲಿಯಾ, ೧ನೇ ಇನಿಂಗ್ಸ್: ೪೫೧

ಭಾರತ, ೧ನೇ ಇನಿಂಗ್ಸ್:

೩ ವಿಕೆಟ್‌ಗೆ ೧೭೩

(ಶುಕ್ರವಾರ ೧ ವಿಕೆಟ್‌ಗೆ ೧೨೦)

ಕೆ.ಎಲ್.ರಾಹುಲ್ ಸಿ ವೇಡ್ ಬಿ ಕುಮ್ಮಿನ್ಸ್ ೬೭, ಮುರಳಿ ವಿಜಯ್ ಬ್ಯಾಟಿಂಗ್ ೭೨, ಚೇತೇಶ್ವರ್ ಪೂಜಾರ ಬ್ಯಾಟಿಂಗ್ ೩೨, ಇತರೆ (ಬೈ ೧, ಲೆಬೈ ೧) ೨

ವಿಕೆಟ್ ಪತನ: ೧-೯೧ (ರಾಹುಲ್, ೩೪.೧೦), ೩-೨೨೫ (ಕೊಹ್ಲಿ, ೮೦.೪

ಜೋಶ್ ಹ್ಯಾಝಲ್‌ವುಡ್ ೧೯–೦; ಪ್ಯಾಟ್ ಕುಮ್ಮಿನ್ಸ್ ೧೪-೪-೩೦-೧; ಸ್ಟೀವ್ ಓ’ಕೀಫ್ ೨೨-೫-೬೧-೦; ನಾಥನ್ ಲಿಯೊನ್ ೨೮-೬-೭೭-೧-೦

 

Leave a Comment