ಭಾರತದ ಬೌಲಿಂಗ್ ದಾಳಿಗೆ ವಿಂಡೀಸ್ ತತ್ತರ

ಹೈದರಾಬಾದ್, ಅ ೧೨- ಭಾರತದ ಬೌಲಿಂಗ್ ದಾಳಿಗೆ ಮತ್ತೆ ತತ್ತರಿಸಿರುವ ಪ್ರವಾಸಿ ವೆಸ್ಟ್ ಇಂಡೀಸ್ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿಂದು ಆರಂಭವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ವಿಂಡೀಸ್ ಬ್ಯಾಟಿಂಗ್ ಆಯ್ಕೆಮಾಡಿಕೊಂಡಿತು.
೩೨ ರನ್ ಗಳಾಗುವಷ್ಟರಲ್ಲಿ ಕೀರನ್ ಪೊವೆಲ್ ವಿಕೆಟ್ ಪತನವಾಯಿತು. ಕೇವಲ ೨೨ರನ್ ಗಳಿಸಿ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಆಡಲು ಬಂದ ಕ್ರೈಗೆ ಬ್ರಾಥ್‌ವೇಟ್ ತಾಳ್ಮೆಯ ಆಟ ಪ್ರದರ್ಶಿಸಲು ವಿಫಲರಾಗಿ ೧೪ ರನ್‌ಗಳಿಸಿ ಕುಲ್‌ದೀಪ್ ಯಾದವ್ ಬೌಲಿಂಗ್‌ನಲ್ಲಿ ಔಟಾದರು. ಶಾಯ್ ಹೋಪ್ ೩೬ ರನ್ ಗಳಿಸಿ ಉಮೇಶ್ ಯಾದವ್ ಬೌಲಿಂಗ್‌ನಲ್ಲಿ ಔಟಾದರು. ಸುನಿಲ್ ಆಂಬ್ರಸ್ ೧೨ ಶಿರ್ಮಾನ್ ಹೆಟ್‌ಮೈ ಹಾಗೂ ೧೮ರನ್‌ಗಳಿಸಿ ಬಹುಬೇಗನೆ ಪವಿಲಿಯನ್‌ನತ್ತ ಮುಖ ಮಾಡಿದರು.
ಭಾರತದ ಪರ ಕುಲ್‌ದೀಪ್ ಯಾದವ್ ೩ ಹಾಗೂ ಉಮೇಶ್ ಯಾದವ್ ಹಾಗೂ ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು. ಇತ್ತೀಚಿನ ವರದಿಗಳು ಬಂದಾಗ ವಿಂಡೀಸ್ ೫ ವಿಕೆಟ್ ನಷ್ಟಕ್ಕೆ ೧೫೪ ರನ್‌ಗಳಿಸಿತ್ತು.ಈಗಾಗಲೇ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿರುವ ವಿಂಡೀಸ್, ಸರಣಿ ಸೋಲಿನ ಭೀತಿಯನ್ನು ಎದುರಿಸುತ್ತಿದೆ. ವಿರಾಟ್ ಕೊಹ್ಲಿ ಸರಣಿ ಗೆಲ್ಲುವ ತವಕದಲ್ಲಿದೆ.

Leave a Comment