ಭಾರತದ ಅನು ಕುಮಾರ್‌ಗೆ ಚಿನ್ನ: ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್

ಗಿಫು, ಜೂ ೧೦-  ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಅನುಕುಮಾರ್ ೮೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದಾರೆ.

ಇವರೊಂದಿಗೆ ಜೂನಿಯರ್ ಮಟ್ಟದ ಡಿಸ್ಕಸ್ ಥ್ರೋ ಎಸೆತಗಾರ್ತಿಯಾದ ಅರ್ಪಣ್‌ದೀಪ್ ಕೌರ್ ಬಾಜ್ವಾ ಸಹ ಮಹಿಳೆಯರ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನ ಮೂರನೇ ದಿನದಾಂತ್ಯಕ್ಕೆ ಭಾರತದ ತೆಕ್ಕೆಯಲ್ಲಿ ಒಟ್ಟು ೩ ಚಿನ್ನ, ೧ಬೆಳ್ಳಿ ಹಾಗೂ ೯ ಕಂಚಿನ ಪದಕಗಳಿವೆ.

ಭಾರತವು ತನ್ನ ಮೂರನೇ ಚಿನ್ನದ ಪದಕವನ್ನು ಉತ್ತರಾಖಂಡ್ ಮೂಲದ ಓಟಗಾರ ಅನು ಕುಮಾರ್ ೧:೫೪.೧೧ ಸೆಕೆಂಡ್‌ಗಳಲ್ಲಿ ಇರಾನಿನ ಅಬ್ದೋಲ್ ರಹೀಮ್ ದೋರ್ಜಾದೆಹ್ ಅವರನ್ನು ಹಿಂದಿಕ್ಕಿ ಗುರಿ ತಲುಪುವ ಮೂಲಕ ಪಡೆದುಕೊಂಡಿತು.

ಭಾರತದ ಭರವಸೆಯ ಓಟಗಾರನಾಗಿರುವ ಅನು ಕುಮಾರ್ ಇದೇ ವರ್ಷ ಫ್ರಾನ್ಸ್‌ನಲ್ಲಿ ನಡೆದ ಜೂನಿಯರ್ ಫೆಡರೇಷನ್  ಕಪ್‌ನ ವರ್ಲ್ಡ್ ಸ್ಕೂಲ್ ಗೇಮ್ಸ್‌ನಲ್ಲಿ ೧ ನಿಮಿಷ ೫೦ ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುವ ಮೂಲಕ ಚಿನ್ನದ ಪದಕ ಗೆದ್ದಿದ್ದರು.

Leave a Comment