ಭಾರತದ ಅಖಂಡತೆಗೆ ಪಾಕ್ ಕಂಟಕ

ವಿಶ್ವಸಂಸ್ಥೆ, ಸೆ.೬- ದಶಕಗಳಿಂದ ಉಗ್ರವಾದವನ್ನು ಪೋಷಿಸುತ್ತಾ ಮತ್ತು ಉಗ್ರರು ಭಾರತದ ಗಡಿಯಲ್ಲಿ ನುಗ್ಗುವುದನ್ನು ಬೆಂಬಲಿಸುತ್ತಾ ಬಂದಿರುವ ಪಾಕಿಸ್ತಾನ ಭಾರತದ ಅಖಂಡತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಪೇಕ್ಷಿಸಿದೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಹೇಳಿದೆ.

ಉಗ್ರವಾದವನ್ನು ದೇಶೀಯ ನೀತಿಯನ್ನಾಗಿಕೊಂಡಿರುವ ಪಾಕಿಸ್ತಾನ ದಶಕಗಳಿಂದ ಉಗ್ರರನ್ನು ಭಾರತದೊಳಕ್ಕೆ ಕಳುಹಿಸುವ ಮೂಲಕ ಭಾರತದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತಂದಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

ವಿಶ್ವ ಸಂಸ್ಥೆಯಲ್ಲಿ ಪಾಕಿಸ್ತಾನದ ಪ್ರತಿನಿಧಿಯಾಗಿರುವ ಮಲ್ಲಿಹಾ ಲೊದಿ ಮತ್ತೊಮ್ಮೆ ವಿಶ್ವಸಂಸ್ಥೆ ವೇದಿಕೆಯಲ್ಲಿ ಕಾಶ್ಮೀರ ಮತ್ತು ಅಲ್ಲಿಯ ಮಾನವ ಹಕ್ಕುಗಳ ಉಲ್ಲಂಘನೆ ಕುರಿತಂತೆ ಮಾತನಾಡಿದ ಶ್ರೀನಿವಾಸ್ ಪ್ರಸಾದ್ ಉಗ್ರವಾದವನ್ನೇ ರಾಷ್ಟ್ರೀಯ ನೀತಿಯನ್ನಾಗಿಸಿಕೊಂಡಿರುವ ಪಾಕಿಸ್ತಾನ ಸಮಗ್ರತೆ, ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಮಾತನಾಡಿರುವುದು ಆಶ್ಚರ್ಯಕರವಾಗಿದೆ ಎಂದರು.

ಭಾರತ ತನ್ನ ನೆರಹೊರೆಯ ದೇಶಗಳ ಸಮಗ್ರತೆಯನ್ನು ಗೌರವಿಸುತ್ತದೆ ವಸುದೈವ ಕುಟುಂಬಕಂ ತತ್ವದಲ್ಲಿ ನಂಬಿಕೆ ಇಟ್ಟಿದೆ ಎಂದ ಶ್ರೀನಿವಾಸ್ ಪ್ರಸಾದ್ ಕಾಶ್ಮೀರ ಹಿಂದೆಯೂ ಮತ್ತು ಮುಂದೆಯೂ ಭಾರತದ ಅವಿಭಾಜ್ಯ ಅಂಗವಾಗಿರುತ್ತದೆ ಎಂದರು.

ಇದಕ್ಕೆ ಮೊದಲು ಮಾತನಾಡಿದ ಪಾಕಿಸ್ತಾನದ ಪ್ರತಿನಿಧಿ ಮಲೀಹಾ ಲೋದಿ ಕಾಶ್ಮೀರವನ್ನು ಆಕ್ರಮಿಸಿಕೊಂಡಿರುವ ಶಕ್ತಿಗಳು ಅಲ್ಲಿಯ ಜನರ ಇಚ್ಛೆಗೆ ವಿರುದ್ಧವಾಗಿ ನಡೆಸಿಕೊಳ್ಳುತ್ತಿವೆ. ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಯಾಗುತ್ತಿವೆ ಎಂದು ಪ್ರತಿಪಾದಿಸಿದರು.

Leave a Comment