ಭಾರತದೆಲ್ಲೆಡೆ ಪಾರ್ಶ್ವ ಚಂದ್ರಗ್ರಹಣ ಗೋಚರ

ನವದೆಹಲಿ, ಜು ೧೭- ೧೪೯ ವರ್ಷಗಳ ಬಳಿಕ ಬಾನಂಗಳದಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಪಾರ್ಶ್ವ ಚಂದ್ರಗ್ರಹಣದ ಕೌತುಕವನ್ನು ಸಹಸ್ರರು ಮಂದಿ ಕಣ್ತುಂಬಿಕೊಂಡಿದ್ದಾರೆ.

ಪಾರ್ಶ್ವ ಚಂದ್ರಗ್ರಹಣ ಸ್ಪರ್ಶಕಾಲ ತಡರಾತ್ರಿ ೧.೩೦ ಕ್ಕೆ ಆರಂಭವಾಗಿ ಮಧ್ಯಕಾಲ ೩ ಗಂಟೆ, ಮೋಕ್ಷಕಾಲ ೪:೩೦ ಕ್ಕೆ ಮುಕ್ತಾಯವಾಗಿದೆ. ಗ್ರಹಣದ ಒಟ್ಟಾರೆ ಗೋಚರಿಸಿದ ಅವಧಿ ಸುಮಾರು ೩ ಗಂಟೆ. ಅರುಣಾಚಲ ಪ್ರದೇಶ ಹೊರತುಪಡಿಸಿ ಭಾರತದೆಲ್ಲೆಡೆ ಪಾರ್ಶ್ವ ಚಂದ್ರಗ್ರಹಣ ಗೋಚರವಾಗಿದೆ.

ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಪಾರ್ಶ್ವ ಚಂದ್ರಗ್ರಹಣ ಗೋಚರಿಸಿದೆ. ಏಷ್ಯಾ ಖಂಡ, ಯುರೋಪ್, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕ, ಆಫ್ರಿಕಾ ಖಂಡದಲ್ಲಿ ಗ್ರಹಣ ಗೋಚರಿಸಿದೆ. ಜನ ಬಾನಂಗಳದಲ್ಲಿನ ಅಪರೂಪದ ದೃಶ್ಯ ಕಣ್ತುಂಬಿಕೊಂಡಿದ್ದಾರೆ. ಚಂದ್ರನು ಭೂಮಿಯ ಹಿಂದೆ ಬಂದು ಅದರ ನೆರಳಿನಲ್ಲಿ ನೇರವಾಗಿ ಹಾದು ಹೋದಾಗ ಚಂದ್ರಗ್ರಹಣ ಸಂಭವಿಸುತ್ತದೆ.

ತಿರುಪತಿಯಲ್ಲಿ ಸ್ಚಚ್ಚತೆ
ಪಾರ್ಶ್ವ ಚಂದ್ರಗ್ರಹಣದ ಹಿನ್ನಲೆಯಲ್ಲಿ ಭಾರತದ ಪ್ರಸಿದ್ಧ ದೇವಾಲಯ ತಿರುಪತಿ, ಸೇರಿದಂತೆ ಅನೇಕ ದೇವಾಲಯಗಳಲ್ಲಿ ನಿನ್ನೆ ಸಂಜೆ ೭ರಿಂದ ದರ್ಶನ ಸ್ಥಗಿತಗೊಳಿಸಲಾಗಿತ್ತು. ಗ್ರಹಣ ಬಿಟ್ಟು ಬಳಿಕ ದೇವಾಲಗಳಲ್ಲಿ ಶುದ್ದಿ ಕಾರ್ಯ ನಡೆಯುತ್ತಿದ್ದು, ತಿರುಪತಿಯಲ್ಲಿ ಸುಮಾರು ೧೦ ಗಂಟೆಗಳ ಕಾಲ ದರ್ಶನವಿಲ್ಲದೇ ಭಕ್ತರು ಪರದಾಡಿದ್ದಾರೆ. ಇಂದು ಸಂಜೆ ಪುಷ್ಪ ಪಲ್ಲಕ್ಕಿ ಸೇವೆಯೊಂದಿಗೆ ಮತ್ತೆ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.

Leave a Comment