ಭಾರತಕ್ಕೆ ವಿಜಯ್, ಪೂಜಾರ ಆಸರೆ

ಹೈದರಾಬಾದ್, ಫೆ.೯- ಮುರಳಿ ವಿಜಯ್ ಹಾಗೂ ಚೇತೇಶ್ವರ್ ಪೂಜಾರ ಅವರ ಶತಕ ಜೊತೆಯಾಟದ ಮೂಲಕ ಆರಂಭ ಆಘಾತದಿಂದ ಚೇತರಿಸಿಕೊಂಡ ಭಾರತ ತಂಡದವರು ಏಕ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ದಿನವಾದ ಇಂದು ಬಾಂಗ್ಲಾದೇಶದ ವಿರುದ್ಧ ಎರಡನೆಯ ಅಧಿವೇಶನದಲ್ಲಿ ೪೦ ಓವರ್‌ಗಳಲ್ಲಿ ೧ ವಿಕೆಟ್‌ಗೆ ೧೨೭ ರನ್ ಮಾಡಿದ್ದರು.
ಊಟದ ಸಮಯಕ್ಕೆ ೨೭ ಓವರ್‌ಗಳಲ್ಲಿ ೧ ವಿಕೆಟ್‌ಗೆ ೮೬ ರನ್ ಮಾಡಿದ್ದ ಭಾರ
ಮುರಳಿ ವಿಜಯ್ (೧೦೮ ಎಸೆತಗಳಲ್ಲಿ ೮ ಬೌಂಡರಿಗಳಿರುವ ೬೪) ಹಾಗೂ ಚೇತೇಶ್ವರ್ ಪೂಜಾರ (೧೨೯ ಎಸೆತಗಳಲ್ಲಿ ೫ ಬೌಂಡರಿಗಳಿರುವ ೫೬) ೨ನೇ ವಿಕೆಟ್‌ಗೆ ೧೨೫ ರನ್ ಸೇರಿಸಿ ಆಡುತ್ತಿದ್ದರು
ಭಾರತ ನೆಲದಲ್ಲಿ ಮೊದಲ ಟೆಸ್ಟ್ ಆಡುತ್ತಿರುವ ಬಾಂಗ್ಲಾದೇಶ ಮೊದಲ ಓವರ್‌ನಲ್ಲೇ ವಿಕೆಟ್ ಗಳಿಸುವಲ್ಲಿ ಯಶಸ್ವಿಯಾಯಿತು. ಬ್ಯಾಟಿಂಗ್ ಆರಿಸಿಕೊಂಡ ಭಾರತದ ಇನಿಂಗ್ಸ್ ಆರಂಭಿಸಿದ ಕೆ.ಎಲ್.ರಾಹುಲ್, ತಸ್ಕಿನ್ ಅಹ್ಮದ್ ಅವರ ನಾಲ್ಕನೆ ಎಸೆತವನ್ನು ಕವರ್ ಡ್ರೈವ್ ಮಾಡಲು ಪ್ರಯತ್ನಿಸಿದಾಗ ಬ್ಯಾಟ್ ಒಳತುದಿಗೆ ಸವರಿದ ಚೆಂಡು ಪ್ಯಾಡ್‌ಗೆ ಬಡಿದು ವಿಕೆಟ್ ಬೇಲ್ಸ್ ಉರುಳಿಸಿತು. ಮುರಳಿ ವಿಜಯ್ ಜೊತೆ ಸೇರಿದ ಚೇತೇಶ್ವರ್ ಪೂಜಾರ ಎಚ್ಚರಿಕೆಯಿಂದ ಆಡುತ್ತಾ ಮೊದಲ ಓವರ್ ಆಘಾತದ ಒತ್ತಡವನ್ನು ನಿವಾರಿಸಿದರು. ಮುರಳಿ ವಿಜಯ್ ಕೂಡ ನಿಧಾನವಾಗಿ ಆಟಕ್ಕೆ ಕುದುರಿಕೊಂಡು ಇನ್ನೊಬ್ಬ ವೇಗಿ ಕಮ್ರುಲ್ ಇಸ್ಮಾಯಿಲ್ ಬೌಲಿಂಗ್‌ನಲ್ಲಿ ನಾಲ್ಕು ಬೌಂಡರಿ ಬಾರಿಸಿದರು. ಇಬ್ಬರೂ ಊಟದ ನಂತರ ಆಕ್ರಮಣಕಾರಿಯಾಗಿ ಅರ್ಧ ಶತಕ ಪೂರೈಸಿದರು.
ಸ್ಕೋರು ವಿವವರ
ಭಾರತ, ೧ನೇ ಇನಿಂಗ್ಸ್: ೧ ವಿಕೆಟ್‌ಗೆ ೬೯
ಕೆ.ಎಲ್.ರಾಹುಲ್ ಬಿ ಸ್ಕಿನ್ ಅಹ್ಮದ್ ೨, ಮುರಳಿ ವಿಜಯ್ ಬ್ಯಾಟಿಂಗ್ ೩೬, ಚೇತೇಶ್ವರ್ ಪೂಜಾರ ಬ್ಯಾಟಿಂಗ್ ೩೧, ಇತರೆ (ಲೆಬೈ ೪, ನೋಬಾ ೧) ೫
ವಿಕೆಟ್ ಪತನ: ೧-೨ (ರಾಹುಲ್, ೦.೪)
ಬೌಲಿಂಗ್: ಸ್ಕಿನ್ ಅಹ್ಮದ್ ೮-೧-೧೭೧-೧; ಕಮ್ರುಲ್ ಇಸ್ಲಾಂ ರಬ್ಬಿ ೧೨-೧-೫೫-೦; ಸೌಮ್ಯ ಸರ್ಕಾರ್ ೧-೦-೪-೦; ಮೆಹೆದಿ ಹಸನ್ ೮-೦-೨೬-೦; ಶಕಿಬ್ ಅಲ್ ಹಸನ್ ೮-೨-೧೮-೦; ತೈಜುಲ್ ಇಸ್ಲಾಂ ೩-೧-೩-೦
ಕ್ಯಾಪ್ಷನ್

Leave a Comment