ಭಾರತಕ್ಕೆ ಭರ್ಜರಿ ಜಯ: ದಕ್ಷಿಣ ಆಫ್ರಿಕಾಗೆ ಭಾರೀ ಮುಖಭಂಗ

ರಾಂಚಿ, ಅ 22-  ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಇನ್ನಿಂಗ್ಸ್ ಹಾಗೂ 202 ರನ್‌ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಟೀಂ ಇಂಡಿಯಾ ಸರಣಿಯನ್ನು 3-0 ಯಿಂದ ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ  ಟೆಸ್ಟ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಅಗ್ರಪಟ್ಟ ಕಾಯ್ದುಕೊಂಡಿದೆ.

ತವರು ನೆಲದಲ್ಲಿ ಸತತ 11ನೇ ಟೆಸ್ಟ್ ಸರಣಿಯನ್ನು ಮುಡಿಗೇರಿಸುವ ಮೂಲಕ ವಿರಾಟ್ ಕೊಹ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲು ಜಯಭೇರಿ ಬಾರಿಸುವ ಮೂಲಕ ಇದುವರೆಗಿನ ಒಟ್ಟು  ಪಂದ್ಯಗಳಲ್ಲಿ ಐದರಲ್ಲು ಗೆಲುವು ಸಾಧಿಸಿ ಬರೋಬ್ಬರಿ 240 ಅಂಕಗಳನ್ನು ಭಾರತ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

india2

ಮೂರು ಪಂದ್ಯಗಳ ಸರಣಿಯುದ್ದಕ್ಕು ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ದಾಳಿಗೆ ಧೊಳೀಪಟವಾದ ಹರಿಣಗಳು, ಭಾರತಕ್ಕೆ ತಿರುಗೇಟು ನೀಡಲು ಸಂಪೂರ್ಣ ವಿಫಲವಾಗಿ ತೀವ್ರ ಮುಖಭಂಗ ಅನುಭವಿಸಿದೆ. ಇನ್ನೂ ಎರಡು ದಿನ ಆಟ ಬಾಕಿ ಉಳಿದಿರುಂತೆ ಕೊಹ್ಲಿ ಪಡೆ ನಿರೀಕ್ಷೆಯಂತೆ ಗೆಲುವಿನ ನಗೆ ಬೀರಿತು.

ಮೊದಲ ಇನ್ನಿಂಗ್ಸ್‌ನಲ್ಲಿ  ಭಾರತದ ಬೌಲಿಂಗ್ ದಾಳಿಗೆ ಪ್ರವಾಸಿ ತಂಡದ ಆಟಗಾರರು ತರೆಗೆಲೆಗಳಂತೆ ವಿಕೆಟ್ ಒಪ್ಪಿಸಿ ಕೇವಲ 162 ರನ್‌ಗಳಿಗೆ ಸರ್ವಪತನ ಕಂಡ ಹಿನ್ನೆಲೆಯಲ್ಲಿ ಫಾಲೋ ಆನ್ ಪಡೆಯಿತು. ಎರಡನೇ ಇನ್ನಿಂಗ್ಸ್‌ಲ್ಲೂ   ಹರಿಣಗಳು ಉತ್ತಮ ಆಟ ಪ್ರದರ್ಶಿಸಲು ವಿಫಲರಾಗಿ ಬಹುಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ನತ್ತ ಮುಖ ಮಾಡಿದರು. ಹಾಗೆ ನೋಡಿದರೆ  ಅಂತಿಮ ಟೆಸ್ಟ್ ಪಂದ್ಯಕ್ಕೆ ನಿನ್ನೆಯೇ ಇತಿಶ್ರೀ ಆಡಬೇಕಾಗಿತ್ತು. ಭಾರತ ಗೆಲುವಿನ ಮೆಟ್ಟಿಲೇರಿಲು ಒಂದು ವಿಕೆಟ್ ಅಗತ್ಯವಿತ್ತು. ಆದರೆ ಮೂರನೇ ದಿನದಾಟದ ಅಂತ್ಯಗೊಂಡಿದ್ದರಿಂದ ಇಂದು ದಕ್ಷಿಣ ಆಫ್ರಿಕಾ ನಾಲ್ಕನೇ ದಿನದ ಆಟವನ್ನು ಮುಂವರೆಸಿತು.

ನಿನ್ನೆ 133 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿದ್ದ  ಪ್ರವಾಸಿ ತಂಡ, ಇಂದು ಈ ಮೊತ್ತಕ್ಕೆ ಒಂದು ರನ್ ಸೇರಿಸದೆ ಸರ್ವಪತನ ಕಂಡು ಸೋಲಿಗೆ ಶರಣಾಯಿತು. ದಿಯೂನಿಸ್ ಡಿ ಬ್ರುಯಾನ್ 30, ಜಾರ್ಜ್ ಲಿಂಡೆ 27 ಹಾಗೂ ಡೇನ್ ಪಿಟ್ 23 ರನ್‌ಗಳಿಸಿದ್ದನ್ನು ಹೊರತು ಪಡಿಸಿ ಉಳಿದ ಆಟಗಾರರು  ಅತಿಥೇಯ ತಂಡದ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡುವಲ್ಲಿ ವಿಫಲರಾದರು.

ಭಾರತದ ಪರ  ಮೊಹ್ಮದ್ ಶಮಿ 3,ಉಮೇಶ್ ಯಾದವ್ 2, ಶಹಬಾಜ್ ನದೀಮ್ 2 ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು,ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ದ್ವಿಶತಕ ಹಾಗೂ ಅಜಿಂಕ್ಯಾ ರೆಹಾನೆ ಶತಕ ಸಿಡಿಸಿ ಬೃಹತ್ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

 

india

ರಾಂಚಿಯ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ  ನಡೆದ ದಕ್ಷಿಣ ಆಫ್ರಿಕಾ ವಿರುದ್ಧ  ಮೂರನೇ ಟೆಸ್ಟ್ ಪಂದ್ಯದಲ್ಲಿ  ಭರ್ಜರಿ ಜಯ ದಾಖಲಿಸಿದ ಬಳಿಕ  ಭಾರತೀಯ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದ್ದು ಹೀಗೆ.

 

ಸಂಕ್ಷಿಪ್ತ ಸ್ಕೋರ್ ವಿವರ

ಭಾರತ

ಮೊದಲ ಇನ್ನಿಂಗ್ಸ್  9 ವಿಕೆಟ್ ನಷ್ಟಕ್ಕೆ 497 ರನ್‌ಗೆ ಡಿಕ್ಲೇರ್

ದಕ್ಷಿಣ ಆಫ್ರಿಕಾ

ಮೊದಲ ಇನ್ನಿಂಗ್ಸ್  162, ಎರಡನೇ ಇನ್ನಿಂಗ್ಸ್  133

ಭಾರತ ಕ್ಲೀನ್ ಸ್ವೀಪ್  ಗೆಲುವಿನ ವಿವರ

1992-93 ಇಂಗ್ಲೆಂಡ್ ವಿರುದ್ಧ 3-0

1993-94  ಶ್ರೀಲಂಕಾ ವಿರುದ್ಧ  3-0

2012-13 ಆಸ್ಟ್ರೇಲಿಯಾ ವಿರುದ್ಧ 4-0

2016-17 ನ್ಯೂಜಿಲೆಂಡ್ ವಿರುದ್ಧ 3-0

2017  ವಿದೇಶಿ ಸರಣಿ 3-0

2019 ದಕ್ಷಿಣ ಆಫ್ರಿಕಾ ವಿರುದ್ಧ 3-0

 

 

Leave a Comment