ಭಾನುವಾರದ ಲಾಕ್ ಡೌನ್  ಮುಚ್ಚಿದ ಅಂಗಡಿ ಮುಂಗಟ್ಟು, ವಾಹನ ಸಂಚಾರ ವಿರಳ

ಬಳ್ಳಾರಿ:ಮೇ.24 ಕೋವಿಡ್-19 ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರೆ ನೀಡಿರುವ ಭಾನುವಾರದ ಲಾಕ್‍ಡೌನ್ ಹಿನ್ನಲೆಯಲ್ಲಿ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ವಾಹನಗಳ ಓಡಾಟ ವಿರಳವಾಗಿದೆ. ಉಳಿದಂತೆ ಅತ್ಯವಶ್ಯಕ ವಸ್ತುಗಳ ಮಳಿಗೆಗೆಳು ತೆರೆದಿವೆ.

ಜನತಾ ಕರ್ಪ್ಯೂ ಮಾದರಿಯಲ್ಲಿ ಇಂದು ಲಾಕ್ ಡೌನ್ ನಡೆಸಲು ಸೂಚಿಸಿತ್ತು. ಇದರಿಂದ ನಿನ್ನೆ ರಾತ್ರಿ 7 ರಿಂದ ನಾಳೆ ಬೆಳಿಗ್ಗೆ 7 ವರೆಗೆ ಭಾನುವಾರದ ಲೌಕ್‍ಡೌನ್ ನಡೆದಿದೆ.
ಅಗತ್ಯ ವಸ್ತುಗಳ ಖರೀದಿಗೆ ಮೆಡಿಕಲ್ ಶಾಪ್, ತರಕಾರಿ, ಹಾಲು, ಕಿರಾಣಿ ಅಂಗಡಿ, ಪೆಟ್ರೋಲ್ ಬಂಕ್ ಹಾಗೂ ಮಟನ್, ಚಿಕನ್‍ಶಾಪ್ ಗಳು ಮಾತ್ರ ತೆರೆದಿವೆ.
ಇನ್ನು ಮದುವೆಗಳನ್ನು ಮಾಡಲು ಅನುಮತಿ ನೀಡಿರುವುದರಿಂದ ಅಲ್ಲಲ್ಲಿ ಮನೆಗಳ ಮುಂದೆ ನಡೆದಿರುವ ವಿವಾಹಗಳಲ್ಲಿ ಜನತೆ ಸೇರಿದ್ದಾರೆ.
ಇನ್ನು ರಸ್ತೆಗಳಲ್ಲಿ ಬಸ್, ಆಟೋ ಮೊದಲಾದ ಸಾರ್ವಜನಿಕ ವಾಹನಗಳ ಸಂಚಾರ ಇಲ್ಲದ ಕಾರಣ, ಕೇವಲ ಬೈಕ್, ಮತ್ತು ಕಾರುಗಳಲ್ಲಿ ಒಂದಿಷ್ಟು ಜನ ಓಡಾಡುತ್ತಿದ್ದಾರೆ.
ಅನಗತ್ಯವಾಗಿ ಯಾರು ಓಡಾಡಬಾರದೆಂದು ಮೈಕ್‍ನಲ್ಲಿ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಪೊಲೀಸರು ಅನೌನ್ಸ್ ಮಾಡುತ್ತಿದ್ದರು. ಪ್ರಮುಖ ರಸ್ತೆ ಸರ್ಕಲ್‍ಗಳಲ್ಲಿ ಡಿಎಆರ್ ವ್ಯಾನ್ ಮತ್ತಿತರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮತ್ತೊಂದು ಕಡೆ ಬಿರು ಬಸಿಲು ಹೆಚ್ಚಾಗಿರುವುದರಿಂದಲೂ ಜನತೆ ಸಹ ಮನೆಯಲ್ಲಿಯೇ ಕಾಲ ಕಳೆಯಲು ಮುಂದಾಗಿದ್ದಾರೆ.

Share

Leave a Comment