ಭವಿಷ್ಯತ್ತಿನ ಕಲಿಕೆಗೆ ಓಬಿಇ ಸಹಕಾರಿ: ಡಾ. ನಿರಂಜನ ನಿಷ್ಟಿ

 

ಕಲಬುರಗಿ:ಈ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಮಾಹಿತಿಯು ಎಲ್ಲ ಕಡೆಯಿಂದ ಹರಿದು ಬರುತ್ತಿದೆ. ಭವಿಷ್ಯದ ವಿಜ್ಞಾನ ಅಪಾರ ಅವಕಾಶಗಳ ಆಗರವಾಗಿದೆ ಇದು ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿ ಕೊಡಲಿದೆ. ಭೋಧನಾ ವೃತ್ತಿಯಲ್ಲಿ ಇರುವವರು ವಿದ್ಯಾರ್ಥಿಗಳ ಆಸಕ್ತಿಯನ್ನು ಗಮನಿಸಿ ಬೋಧನೆ ಮಾಡಬೇಕು ಆಗ ಬೋಧನೆ ಪರಿಪೂರ್ಣವಾಗುತ್ತದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ನಿಷ್ಟಿ ಹೇಳಿದರು.

ಸೋಮವಾರ ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪಾ ಸಭಾ ಮಂಟಪದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮುನಿಕೇಷನ್ ವಿಭಾಗ ಮತ್ತು ಇನ್ಸಟ್ಯೂಷನ್ ಆಫ್ ಇಂಜಿನಿಯರ್ ಕಲಬುರಗಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಓಬಿಇ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಬೋಧನಾ ವೃತ್ತಿಯು ಜಗತ್ತಿನಲ್ಲಿಯೇ ಅತೀ ಶ್ರೇಷ್ಟ ವೃತ್ತಿಯಾಗಿದೆ ದೇಶದ ಬೆಳವಣಿಗೆಯಲ್ಲಿ ಬೋಧಕರ ಪಾತ್ರ ಅಪಾರವಾಗಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವದ ಮೇಲೆ ಬೋಧಕರು ದೀರ್ಘಕಾಲಿಕ ಪರಿಣಾಮ ಬೀರುವಂತಹ ಶಕ್ತಿ ಹೊಂದಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನ ಕ್ಯಾಂಬ್ರಿಡ್ಜ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ. ಡಿ ಎಚ್ ರಾವ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿ, ಓಬಿಇ( ಔಟಕಮ್ ಬೆಸಡ್ ಎಜುಕೇóಶನ್) ಪದ್ಧತಿಯು ವಿದ್ಯಾರ್ಥಿಗಳ ಭವಿಷ್ಯತ್ತಿಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಓಬಿಇ ಪದ್ಧತಿಯು ವಿದ್ಯಾರ್ಥಿಗಳು ಏನು ಮಾಡಲು ಶಕ್ತರಾಗಿದ್ದಾರೆ ಎಂದು ತಿಳಿಯಲು ನೆರವಾಗುತ್ತದೆ ಅಲ್ಲದೇ ಅದಕ್ಕೆ ತಕ್ಕಂತೆ ಸಹ ಪಠ್ಯ ಚಟುವಟಿಕೆ, ಸಲಹೆ, ನಿಯೋಜಿತ ಕಾರ್ಯ ನೀಡಿ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಮತ್ತು ವರ್ತನೆ ಬದಲಾವಣೆ ತರುತ್ತದೆ ಎಂದು ಹೇಳಿದರು.

ಈ ವಿಧಾನ ಅಧ್ಯಯನ ವಿಷಯದ ಮೇಲೆ ಮುಖ್ಯ ಗಮನ ಹರಿಸಿ ವಿದ್ಯಾರ್ಥಿಗಳ ಬುದ್ಧಿಮತ್ತೆಯನ್ನು ಅಳೆಯಲು ಸಹಕಾರ ನೀಡುತ್ತದೆ ಈ ಪ್ರಕ್ರಿಯೆಯಲ್ಲಿ ಅಪಾರ ಪ್ರಮಾಣದ  ದತ್ತಾಂಶ ಸಂಗ್ರಹಿಸಿ ನಿಯಮಿತ ಕಾಲಕ್ಕೆ ವಿಮರ್ಶೆ ಮಾಡಲಾಗುತ್ತದೆ ಇದರಿಂದ ಕಲಿಸುವ ಮತ್ತು ಕಲಿಯುವ ವಿಧಾನ ಸುಧಾರಣೆಯಾಗುತ್ತದೆ ಎಂದರು.

ಓಬಿಇ ವಿಧಾನದಲ್ಲಿ ಶಿಕ್ಷಕ ಕೇಂದ್ರಿತ ಶಿಕ್ಷಣ ಪದ್ಧತಿಯು ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಪದ್ಧತಿಯಾಗಿ ಬದಲಾಗುತ್ತದೆ ಈ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರೇರಣೆ ಮೂಡಿ ಅವರು ಹೆಚ್ಚು ಹೆಚ್ಚು ಅವಕಾಶಗಳು ಪಡೆಯಲು ಸಾಧ್ಯವಾಗುತ್ತದೆ ಎಂದು ನುಡಿದರು.

ಕಾರ್ಯಾಗಾರದ ವೇದಿಕೆಯ ಮೇಲೆ ಸಮ ಕುಲಪತಿ ಡಾ. ವಿ ಡಿ ಮೈತ್ರಿ, ಇನ್ಸಟ್ಯೂಷನ್ ಆಫ್ ಇಂಜಿನಿಯರ್ ಅಧ್ಯಕ್ಷ ಪ್ರೊ. ಬಿ ಎಸ್ ಮೋರೆ, ಇನ್ಸಟ್ಯೂಷನ್ ಆಫ್ ಇಂಜಿನಿಯರ್ ಕಾರ್ಯದರ್ಶಿ ಡಾ. ಬಾಬುರಾವ ಶೇರಿಕಾರ, ಡೀನ್ ಡಾ. ಲಿಂಗರಾಜ ಶಾಸ್ತ್ರಿ, ಮೌಲ್ಯಮಾಪನ ಕುಲಸಚಿವ ಡಾ. ಶಿವದತ್ತ ಹೊನ್ನಳ್ಳಿ, ಡಾ. ಲಕ್ಷ್ಮೀ ಮಾಕಾ, ಡಾ. ಬಸವರಾಜ ಮಠಪತಿ, ಡಾ. ಶಿವುಕುಮಾರ ಜವಳಗಿ ಇದ್ದರು.

ಪ್ರೊ. ರೇಖಾ ಸ್ವಾಗತಿಸಿದರು. ಪ್ರೊ. ಅಮೃತಾ ನಿರೂಪಿಸಿದರು. ಪ್ರೊ. ನಟರಾಜ ವಂದಿಸಿದರು…

Leave a Comment