ಭತ್ತ ಹೊಟ್ಟು ತೆಗೆಯುವ ಯಂತ್ರ ಉದ್ಘಾಟನೆ

ರಾಯಚೂರು.ಜು.11- ಸಿಂಧನೂರು ಪಟ್ಟಣದ ನಾಲ್ಕನೇ ಮೈಲ್ ಕ್ಯಾಂಪಿನಲ್ಲಿ ಸೌರ ಚಾಲಿತ ಭತ್ತ ಹೊಟ್ಟು ತೆಗೆಯುವ ಯಂತ್ರವನ್ನು ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಅವರು, ಕಿಸಾನ್ ಭಾರತಿ ಟ್ರಸ್ಟ್ ಸೆಲ್ಕೋ ಫೌಂಡೇಷನ್ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ರೈತ ಸ್ನೇಹಿ ಭತ್ತ ಹೊಟ್ಟು ತೆಗೆಯುವ ಯಂತ್ರಕ್ಕೆ ಚಾಲನೆ ನೀಡಲಾಗಿದ್ದು, ಮಿತ ಖರ್ಚಿನಡಿ ಅಧಿಕ ಲಾಭಾಂಶ ನೀಡುವ ಯಂತ್ರದ ಸದುಪಯೋಗವನ್ನು ರೈತರು ಪಡೆದುಕೊಳ್ಳುವಂತ ಸಲಹೆ ನೀಡಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಕಿಸಾನ್ ಭಾರತಿ ಟ್ರಸ್ಟ್ ಸಂಚಾಲಕರಾದ ಎಸ್.ವಿ.ಪಾಟೀಲ್ ವಹಿಸಿದ್ದರು.
ಸೆಲ್ಕೋ ಫೌಂಡೇಷನ್‌ನ ಗುಣಶೇಖರ, ಸತೀಶನ್, ನಗರಸಭೆ ಅಧ್ಯಕ್ಷೆ ಮಂಜುಳಾ ಪಾಟೀಲ್, ಫೌಂಡೇಷನ್ ವ್ಯವಸ್ಥಾಪಕರಾದ ಆನಂದಕುಮಾರ ಮಿರ್ಜಾಪುರ ಇನ್ನಿತರರು ಉಪಸ್ಥಿತರಿದ್ದರು.

Leave a Comment