ಭತ್ತ, ತೋಟಗಾರಿಕೆ, ಮೆಣಸಿನಕಾಯಿ ಬೆಳೆಗಾರರಿಗೆ ನಷ್ಟ

ಕೊರೊನಾ ಲಾಕ್ ಡೌನ್ : ರೈತರ ಪಾಲಿಗೆ ಶಾಪ
ರಾಯಚೂರು.ಏ.02- ಕೊರೊನಾ ಲಾಕ್ ಡೌನ್ ಒಂದೆಡೆ ಸಾರ್ವಜನಿಕರನ್ನು ಮನೆಗೆ ಸೀಮಿತಗೊಳಿಸಿದ್ದರೇ, ಮತ್ತೊಂದೆಡೆ ರೈತರನ್ನು ಭಾರೀ ನಷ್ಟಕ್ಕೆ ದೂರುವಂತೆ ಮಾಡಿದೆ.
ಜಿಲ್ಲೆಯಲ್ಲಿ ಭತ್ತದ ಕಟಾವ್ ಪ್ರಕ್ರಿಯೆ ಆರಂಭಗೊಂಡಿದೆ. ಮತ್ತೊಂದೆಡೆ ಭಾರೀ ಪ್ರಮಾಣದಲ್ಲಿ ಬೆಳೆದ ಮೆಣಸಿನಕಾಯಿ ಮಾರಾಟಕ್ಕೆ ವ್ಯವಸ್ಥೆ ಇಲ್ಲದೇ, ರೈತರು ದುಬಾರಿ ಬೆಲೆಗೆ ಕೋಲ್ಟ್ ಸ್ಟೋರೆಜ್‌ನಲ್ಲಿ ಇದನ್ನು ಸಂಗ್ರಹಿಸುವ ಪರಿಸ್ಥಿತಿ ಬಂದಿದೆ. ಮುದುಗಲ್‌ನಲ್ಲಿ ಲಕ್ಷ್ಮಿನಾಯಕ್ ಎನ್ನುವ ರೈತ ಬೆಳೆದ ಕಲ್ಲಂಗಡಿ ಹಣ್ಣಿಗೆ ಮಾರುಕಟ್ಟೆಯಿಲ್ಲದೇ ಕಲ್ಲಂಗಡಿ ಹೊಲದಲ್ಲಿಯೇ ಕೊಳೆಯುತ್ತಿವೆ.
ಈ ರೀತಿ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ರೈತರು ಕೊರೊನಾ ಲಾಕ್ ಡೌನ್‌ನಿಂದ ಭಾರೀ ನಷ್ಟಕ್ಕೆ ಗುರಿಯಾಗಿ ಮುಂಬರುವ ದಿನಗಳಲ್ಲಿ ಜನ ಸಾಮಾನ್ಯರು ದಿನದ ಊಟಕ್ಕೂ ಪರದಾಡುವ ಅಭಾವದ ಸ್ಥಿತಿ ನಿರ್ಮಾಣದ ಆತಂಕ ಸಮಾಜದಲ್ಲಿ ಹೆಚ್ಚುತ್ತಿದೆ. ಭತ್ತ ಕಟಾವ್ ಪ್ರಕ್ರಿಯೆ ಆರಂಭಗೊಂಡಿದ್ದು, ರೈತರಿಗೆ ಭತ್ತ ಕಟಾವಿಗೆ ಕೂಲಿಗಳಿಂದ ಸಮಸ್ಯೆಯಿಡಿದು ಭತ್ತ ಕಟಾವ್ ಆಗುವವರೆಗೂ ಮಾರುಕಟ್ಟೆಗೆ ಸಾಗಿಸುವವರೆಗೆ ಅನೇಕ ಸವಾಲ್ ಎದುರಿಸುವಂತೆ ಮಾಡಿದೆ.
ಮೆಣಸಿನಕಾಯಿ ಕಟಾವ್ ಅಂತರ ಮಾರಾಟಕ್ಕೆ ವ್ಯವಸ್ಥೆ ಇಲ್ಲದ ಕಾರಣ ಅಸ್ಕಿಹಾಳ ಬಳಿಯಿರುವ ಕೋಲ್ಡ್ ಸ್ಟೋರೆಜ್‌ನಲ್ಲಿ ಭಾರೀ ಪ್ರಮಾಣದಲ್ಲಿ ಮೆಣಸಿನಕಾಯಿ ದಾಸ್ತಾನು ನಡೆದಿದೆ. ಪ್ರತಿ ಚೀಲಕ್ಕೆ 140 ರೂ.ಯಂತೆ ಬಾಡಿಗೆಯೊಂದಿಗೆ ಮೆಣಸಿನಕಾಯಿ ದಾಸ್ತಾನು ಮಾಡುವ ಅನಿವಾರ್ಯತೆ ರೈತರಿಗೆ ಬಂದೋದಗಿದೆ.
ಜಿಲ್ಲೆಯಲ್ಲಿ ಒಟ್ಟು 6695 ಹೆಕ್ಟರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. 13,300 ಟನ್ ಮೆಣಸಿನಕಾಯಿ ಕಟಾವ್ ಮಾಡಲಾಗಿದೆ. ಪ್ರಸ್ತುತ ಮಾರುಕಟ್ಟೆ ಸಮಸ್ಯೆ ಹಿನ್ನೆಲೆಯಲ್ಲಿ ಲಾರಿಗಟ್ಟಲೇ ತಂದು ಕೋಲ್ಡ್ ಸ್ಟೋರೆಜ್‌ನಲ್ಲಿ ಸಂಗ್ರಹಿಸಲಾಗುತ್ತಿದೆ. ಲಾಕ್ ಡೌನ್ ತೆರವು ಮತ್ತು ಮಾರುಕಟ್ಟೆಗೆ ಸಾಗಿಸುವುದು ಎಂದೂ ಎನ್ನುವುದು ರೈತರಿಗೆ ಗೊಂದಲವಾಗಿದೆ.
ಸರ್ಕಾರ ಕೂ‌ಡಲೇ ಮದ್ಯ ಪ್ರವೇಶಿಸಿ, ರೈತರಿಗೆ ನೆರವಾಗದಿದ್ದರೇ, ವರ್ಷಗಟ್ಟಲೇ ಕಷ್ಟಪಟ್ಟು ಕೃಷಿ ಚಟುವಟಿಕೆ ನಡೆಸಿದ ರೈತರು ಕೊರೊನಾದಿಂದಾಗಿ ಭಾರೀ ನಷ್ಟಕ್ಕೆ ಗುರಿಯಾಗಿ, ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

Leave a Comment