ಭತ್ತದ ಕೊಯ್ಲಿಗೆ ಸಿಎಂ ಸಜ್ಜು

ಕುಮಾರಸ್ವಾಮಿ ಆಗಮನಕ್ಕೆ ಕಳೆಗಟ್ಟಿದ ಸೀತಾಪುರ
ಮಂಡ್ಯ. ಡಿ.7: ಮುಂಗಾರಿನ ಸಮಯದಲ್ಲಿ ರೈತರೊಂದಿಗೆ ಜಮೀನಿಗಿಳಿದು ಭತ್ತದ ನಾಟಿ ಮಾಡಿದ್ದ ಸಿಎಂ ಈಗ ಭತ್ತದ ಕೊಯ್ಲು ಮಾಡಲಿದ್ದು, ಹಾಗೇ ಭತ್ತದ ಒಕ್ಕಣೆ ಮಾಡಿ, ರಾಶಿ ಪೂಜೆ ಮಾಡುವ ಮೂಲಕ ಸುಗ್ಗಿ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.
ಜಿಲ್ಲೆಯ ಪಾಂಡವಪುರದ ಸೀತಾಪುರದಲ್ಲಿ ಕಳೆದ ಆಗಸ್ಟ್​ 11 ರಂದು ಕೃಷಿಕರೊಂದಿಗೆ ತಾವು ರೈತರಾಗಿ ಗದ್ದೆಗೆ ಇಳಿದಿದ್ದರು. ಸಿಎಂ ಅಂದು ನಾಟಿ ಮಾಡಿದ್ದ ಭತ್ತದ ಪೈರುಗಳು ಇಂದು ಸಮೃದ್ಧವಾಗಿ ಬೆಳೆದಿದ್ದು, ಕಟಾವಿಗೆ ರೆಡಿಯಾಗಿದೆ. ಈ ಕಟಾವಿಗೆ ಬಂದಿರುವ ಭತ್ತದ ತೆನೆಗಳನ್ನು ಸ್ವತಂ ಸಿಎಂ ಕೊಯ್ಲು ಮಾಡಲಿದ್ದಾರೆ.
ರೈತ ದೇವರಾಜ್​ಅವರ 5 ಎಕರೆ ಗದ್ದೆಯಲ್ಲಿ ಸಂಜೆ 4 ಗಂಟೆಗೆ ಸಿಎಂ ಕೊಯ್ಲು ಕಾರ್ಯ ಆರಂಭಿಸಲಿದ್ದು, ಇದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದಾದ ಬಳಿಕ ಭತ್ತದ ಒಕ್ಕಣೆ ಮಾಡಿ, ರಾಶಿ ಪೂಜೆ ಮಾಡಿ ಸುಗ್ಗಿ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ.
ಸಿಎಂ ಆಗಮನ ಹಿನ್ನಲೆ ಮತ್ತೊಮ್ಮೆ ಸೀತಾಪುರ ಗ್ರಾಮ ನವ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಕುಮಾರಸ್ವಾಮಿ ಅವರನ್ನು ಸ್ವಾಗತಕೋರಲು ಗ್ರಾಮಸ್ಥರು ಸಜ್ಜಾಗಿದ್ದಾರೆ.

Leave a Comment