ಭಗತ್‍ಸಿಂಗ್ ಪ್ರತಿಮೆ ತೆರವು – ಪ್ರತಿಭಟನೆ

ದಾವಣಗೆರೆ, ಜ. ೧೩- ನಗರದ ರೈಲ್ವೆ ಸ್ಟೇಷನ್ ಮುಂಭಾಗದಲ್ಲಿ ಇದ್ದ ಕ್ರಾಂತಿಕಾರಿ ಭಗತ್‍ಸಿಂಗರ ಪ್ರತಿಮೆ ತೆರವುಗೊಳಿಸಿದ್ದನ್ನು ವಿರೋಧಿಸಿ ಎಐಡಿಎಸ್‍ಓ, ಎಐಡಿಐಓ, ಎಐಎಂಎಸ್‍ಎಸ್ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆ ನಡೆಸಿದರು. ಭಗತ್‍ಸಿಂಗ್‍ರ ಪ್ರತಿಮೆ ಇದ್ದ ಸ್ಥಳದಿಂದ ಮಹಾನಗರ ಪಾಲಿಕೆವರೆಗೆ ಪ್ರತಿಭಟನೆ ನಡೆಸಿ, ಕ್ರಾಂತಿಕಾರಿ ಭಗತ್‍ಸಿಂಗರ ಪ್ರತಿಮೆಯನ್ನು ಯಾವುದೇ ಮುನ್ಸೂಚನೆ ನೀಡದೆ ತೇಗೆದು, ಯಾವುದೇ ಮೂಲೆಯಲ್ಲಿ ಪ್ರತಿಷ್ಠಾಪನೆ ನಡೆಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು. ಭಗತ್‍ಸಿಂಗ್ ಪ್ರತಿಮೆ ಸ್ಥಳಾಂತರ ಮಾಡುವಾಗ ಸಂಘಟನೆಗಳ ಮುಖಂಡರನ್ನು ಕರೆದು ಚರ್ಚಿಸಬೇಕೆಂದು ಮನವಿ ಮಾಡಲಾಗಿತ್ತಾದರೂ, ಯಾರನ್ನೂ ಕರೆದಿಲ್ಲ. ರಾತೋರಾತ್ರಿ ತೆರವು ಮಾಡಿ, ರಾಷ್ಟ್ರನಾಯಕರನ್ನು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು. ತೆರವು ಗೊಳಿಸಿದ ಪ್ರತಿಮೆಯನ್ನು ನಗರದ ಪ್ರಮುಖ ಸ್ಥಳವಾದ ರೈಲು ನಿಲ್ದಾಣದ ಎದುರು ಪುನರ್‍ಸ್ಥಾಪಿಸಬೇಕು. ಅಲ್ಲದೆ ನೇತಾಜಿ ಅವರ ಪ್ರತಿಮೆಯನ್ನೂ ನಗರದ ಪ್ರಮುಖ ಸ್ಥಳದಲ್ಲಿ ಸ್ಥಾಪಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಗಳ ಮುಖಂಡರಾದ ಮಂಜುನಾಥ ಕೈದಾಳ, ಮಂಜುನಾಥ ಕುಕ್ಕವಾಡ, ತಿಪ್ಪೆಸ್ವಾಮಿ, ಮಧು ತೊಗಲೇರಿ, ಸೌಮ್ಯ, ಭಾರತಿ, ಬನಶ್ರೀ, ನಾಗಜ್ಯೋತಿ, ಸ್ಮಿತ, ಶಶಿಕುಮಾರ್, ಮಂಜುನಾಥ ರೆಡ್ಡಿ, ರಘು ದೊಡ್ಮನಿ ಸೇರಿದಂತೆ ಮತ್ತಿತರರು ಇದ್ದರು. ಇದೇ ಸಂದಭದಲ್ಲಿ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ಅವರಿಗೆ ಬೇಡಿಕೆಯ ಮನವಿ ಅರ್ಪಿಸಿದರು.

Leave a Comment