ಭಕ್ತರ ಇಷ್ಟಾರ್ಥ ನೆರವೇರಿಸುವ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀದೇವಿ

ನಮ್ಮ ನಾಡಿನಲ್ಲಿ ಪುಣ್ಯಸ್ಥಳಗಳಿಗೆ, ಇತಿಹಾಸ ಸ್ಥಳಗಳಿಗೆ ಕೊರತೆಇಲ್ಲ, ಇವುಗಳಲ್ಲಿ ಕೆಲವು ಅತ್ಯಂತ ಜನಪ್ರತಿಯವಾದ ತೀರ್ಥಕ್ಷೇತ್ರಗಳಾಗಿಯೂ, ಇತಿಹಾಸ ಸ್ಥಳಗಳಾಗಿಯೂ ಸರ್ವ ಸೌಲಭ್ಯಗಳನ್ನು ಪಡೆದಿರಬಹುದು ಇನ್ನು ಕೆಲವು ಇವಕ್ಕಿಖತ ಹೆಚ್ಚಿನ ಹಿನ್ನಲೆ ಇದ್ದು ಜಾಗೃತ ಕಣ್ಣಿನಿಂದ ಅಗೋಚರವಾಗಿ ಯಾವ ಸೌಲಭ್ಯವನ್ನೂ ಪಡೆಯದೆ ವಂಚಿತವಾಗಿದ್ದಿರಬಹುದು, ಇಂತಹ ಜಾಗೃತ ಸ್ಥಳಗಳಲ್ಲಿ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯವೂ ಒಂದು.

ಗೊರವನಹಳ್ಳಿ ಮಹಾಲಕ್ಷ್ಮಿ ಹಾಗೂ ಗೊರವನಹಳ್ಳಿ ಗ್ರಾಮದ ಬಗ್ಗೆ ಚಾರಿತ್ರಿಕವಾಗಲೀ, ಶಿಲಾಶಾಸನಗಳಿಂದಾಗಿ ಯಾಗಲಿ ಯಾವ ವಿಧವಾದ ದಾಖಲೆಗಳಿಲ್ಲ, ಆದರೆ ಈ ದೇವಿಯ ಬಗ್ಗೆ ತಲೆ ಮಾರುಗಳಿಂದ ನಡೆದು ಬಂದಂಥ ನಂಬಿಕೆಯಿಂದ ಹಳೇ ಕರ್ನಾಟಕದ ಮನೆ ದೇವತೆಯಾಗಿ ರಾರಾಜಿಸುತ್ತಿದ್ದಾಳೆ, ಇಲ್ಲಿ ನಡೆದ ಮತ್ತು ಇಂದಿಗೂ ನಡೆಯುತ್ತಿರುವ ಕೆಲವು ಘಟನೆಗಳು ನಾಸ್ತಿಕರಲ್ಲಿ ಯಾವುದೋ ಒಂದು ಆಗೋಚರ ಶಕ್ತಿ ಇದೆ ಎನ್ನವ ನಂಬಿಕೆ ಹುಟ್ಟಿಸುತ್ತಿರುವುದು ಅನ್ನ ನೀರು, ಉಸಿರಾಟದಷ್ಟೇ ಸತ್ಯ… ಗೊರವನಹಳ್ಳಿ ಮಹಾಲಕ್ಷ್ಮಿಯ ಬಗ್ಗೆ ಹಲವಾರು ದಂತಕತೆಗಳು ಐತಿಹಾಸ್ಯಗಳು ಪ್ರಚಾರದಲ್ಲಿವೆ.

ದೇವರಾಯನ ದುರ್ಗದ ಯೋಗಾನರಸಿಂಹ, ಬೋಗಾನಸಸಿಂಹ ಎಂಬ ನಾಮರೂಪಗಳಲ್ಲಿ ಲೋಕರಕ್ಷಣೆ ಮಾಢುತ್ತಿರುವ ಮಹಾ ವಿಷ್ಣುವನ್ನು ಸೇವಿಸುತ್ತಾ ಇರುವ ಆದಿಶೇಷನೇ ಪಕ್ಕದಲ್ಲಿ ನೆಸಿಸರುವನೆಂಬುದು ಭಕ್ತರ ನಂಬಿಕೆ, ವಿಚಿತ್ರವೆಂದರೆ ಹೆಬ್ಬಾವಿನ ಗಾತ್ರದ ಸರ್ಪವೊಂದು ಪುಜಾಸಮಯದಲ್ಲಿ ಹಲವಾರು ಭಕ್ತಿರಿಗೂ ಗರ್ಭಗುಡಿಯ ಸಮೀಪದ ಹುತ್ತದಲ್ಲಿ ಗೋಚರಿಸುತ್ತಿರುವು ಇಂದಿಗೂ ಆಗಾಗ ನಡೆಯುತ್ತಿರುವ ಘಟನೆಗಳಲ್ಲಿ ಒಂದು.

Leave a Comment