ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಜನರ ತೀರ್ಪಿಗೆ ತಲೆ ಬಾಗುವೇ-ಎನ್‌ಎಸ್‌ಬಿ
ಮಾನ್ವಿ.ಜೂ.13- ಇತ್ತೀಚಿಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಹಂಪಯ್ಯ ಸಾಹುಕಾರ ಅವರು ಪರಾಭವದ ಜನತೆ ತೀರ್ಪಿಗೆ ತಲೆ ಬಾಗುವೇ ಎಂದು ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಹೇಳಿದರು.
ಅವರಿಂದು ಪಟ್ಟಣದ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ಮಾನ್ವಿ, ಸಿರವಾರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರು, ಮುಖಂಡರು ಹಗಲಿರುಳು ಶ್ರಮಿಸಿದರೂ, ಗೆಲುವಿನ ಭಾಗ್ಯ ನಮಗೆ ದೊರೆಯಲಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ 5 ವರ್ಷಗಳ ಅಧಿಕಾರವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನು ತಾಲೂಕಿನಾದ್ಯಂತ ಸಮರ್ಪಕವಾಗಿ ಜಾರಿಗೊಳಿಸಲಾಗಿದೆ. ಆದರೆ, ಮತದಾರರು ನೀಡಿರುವ ತೀರ್ಪಿಗೆ ತಲೆ ಬಾಗಬೇಕಾಗಿದೆ. ಕಾಂಗ್ರೆಸ್ ಸರ್ಕಾರಾವಧಿಯಲ್ಲಿ ಅನ್ಯಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಹತ್ತು ಹಲವು ಜನಪರ ಯೋಜನೆ ಜಾರಿಗೊಳಿಸಲಾಗಿದೆ.
ರೈತರು ಪಡೆದಿರುವ ಸಹಕಾರಿ ಬ್ಯಾಂಕ್‌‌ಗಳಲ್ಲಿ 50 ಸಾವಿರ ರೂ. ಸಾಲ ಮನ್ನಾ ಮಾಡುವ ಮೂಲಕ ರೈತರ ನೆರವಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಧಾವಿಸಿದ್ದಾರೆ. ಅಭ್ಯರ್ಥಿ ಪರಾಭವದಿಂದ ಕಾರ್ಯಕರ್ತರು, ಮುಖಂಡರು ಎದೆಗುಂದದೆ ತಾಲೂಕಿನಲ್ಲಿ ಪಕ್ಷವನ್ನು ಬಲಿಷ್ಟಗೊಳಿಸಲು ಶ್ರಮಿಸಬೇಕಾಗಿದೆ.
ರಾಜ್ಯದಲ್ಲಿ ಕೋಮುವಾದಿ ಬಿಜೆಪಿ ಪಕ್ಷವೂ ಅಧಿಕಾರದಿಂದ ದೂರ ಉಳಿಯುವ ನಿಟ್ಟಿನಲ್ಲಿ ಕಾಂಗ್ರೆಸ್-ಜಾದಳ ಸಮ್ಮಿಶ್ರ ಸರ್ಕಾರ ರಚಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋರಾಟಕ್ಕೆ ಎಲ್ಲಾ ಪಕ್ಷಗಳು ಒಂದಾಗುವ ಕಾಲ ಸನ್ನಿಹಿತಗೊಂಡಿದೆಂದರು.
ಮಾಜಿ ಶಾಸಕ ಜಿ.ಹಂಪಯ್ಯ ನಾಯಕ, ರಾಯಚೂರು ಗ್ರಾಮಾಂತರ ಶಾಸಕ ದದ್ದಲ ಬಸವನಗೌಡ, ಅಬ್ದುಲ್ ಗಫೂರ್ ಸಾಬ್, ಅಯ್ಯನಗೌಡ ಜಂಬಲದಿನ್ನಿ, ಬಿ.ಕೆ. ಅಮರೇಶಪ್ಪ, ಹುಸೇನಪ್ಪ ಜೆಗ್ಲಿ, ವೀರಭದ್ರಪ್ಪಗೌಡ, ಗಂಗಣ್ಣ ನಾಯಕ, ಜಿ.ನಾಗರಾಜ, ಕಿರಿಲಿಂಗಪ್ಪ ಕವಿತಾಳ, ಸಣ್ಣ ಬಸವನಗೌಡ ಬ್ಯಾಗವಾಟ್, ಈರಪ್ಪಗೌಡ ಚೀಕಲಪರ್ವಿ, ಸೈಯದ್ ಖಾಲೀದ್ ಖಾದ್ರಿ ಗುರು, ಸೈಯದ್ ಹುಸೇನ್, ಕಾನೂನು ಸಲಹೆಗಾರ ವೀರನಗೌಡ ಪೋತ್ನಾಳ ವಕೀಲರು, ದಾನನಗೌಡ ಸಿರವಾರ, ಜಯಪ್ರಕಾಶ, ಪ್ರವೀಣ ಕುಮಾರ, ಡ್ಯಾನಿಯಲ್, ಪಂಪನಗೌಡ ಸೇರಿದಂತೆ ನೂರಾರು ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Comment