ಬ್ರೆಜಿಲ್ ನಟಿಯನ್ನು ಲಾಂಚ್ ಮಾಡಲಿರುವ ಸಲ್ಮಾನ್

ಮುಂಬೈ, ಫೆ 15 -ಬಾಲಿವುಡ್ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ಈಗಾಗಲೇ ಹಲವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಈಗ ಬ್ರೆಜಿಲ್ ನಟಿ ಹಾಗೂ ಮಾಡೆಲ್  ಲಾರಿಸ್ಸಾ ಬೊನೆಸಿ  ಅವರನ್ನು ಲಾಂಚ್ ಮಾಡಲು ಹೊರಟಿದ್ದಾರೆ.

ಹೊಸ ಹೊಸ ಮುಖಗಳನ್ನು ಪರಿಚಯಿಸುವಲ್ಲಿ ಮುಂಚುಣಿಯಲ್ಲಿರುವ ಸಲ್ಮಾನ್ ಖಾನ್  ಅವರನ್ನು ಬಾಲಿವುಡ್ ನ ಗಾಡ್ ಫಾದರ್ ಎಂದೇ  ಕರೆಯಲಾಗುತ್ತದೆ.

ಲಾರಿಸ್ಸಾ ಬೊನಸಿ, ‌ಸಾಮಾಜಿಕ ಜಾಲತಾಣವೊಂದರಲ್ಲಿ ಸಲ್ಮಾನ್ ಹಾಗೂ ತಾವಿರೂವ ಛಾಯಾಚಿತ್ರ ವೊಂದನ್ನು ಶೇರ್ ಮಾಡಿ, ಸಲ್ಮಾನ್ ಖಾನ್ ಅವರೊಂದಿಗೆ ನಟಿಸಲು ಹೆಮ್ಮೆ ಎನಿಸುತ್ತದೆ. ಇದೊಂದು ಸಂತಸದ ವಿಷಯ. ಅವರೊಟ್ಟಿಗೆ ನಟಿಸುವಾಗ ಹಲವು ವಿಷಯಗಳನ್ನು ಕಲಿತಿದ್ದೇನೆ. ಅಲ್ಲದೇ, ಅವರ ನಟನೆಯಿಂದ ತುಂಬಾ ಪ್ರಭಾವಿ ತಳಾಗಿದ್ದೇನೆ.‌ ನನ್ನ ಪಾಲಿಗೆ ನಾನು ಅದೃಷ್ಟವಂತೆ ಎಂದು ಭಾವಿಸುತ್ತೇನೆ. ನನ್ನ ಹೃದಯ ಕೃತಜ್ಞತಾ ಭಾವದಿಂದ ಬಡಿದುಕೊಳ್ಳುತ್ತಿದೆ. ಧನ್ಯವಾದ! ಎಂದು ಬರೆದುಕೊಂಡಿದ್ದಾರೆ.

ಲಾರಿಸ್ಸಾ ಬೊನೆಸಿ ಬ್ರೆಜಿಲ್ ಮಾಡೆಲ್, ಡ್ಯಾನ್ಸರ್ ಆಗಿದ್ದು, ‌ಈಗಾಗಲೇ ನಟರಾದ ಅಕ್ಷಯ್ ಕುಮಾರ್ ಹಾಗೂ ಜಾನ್ ಅಬ್ರಾಹಂ ಅವರೊಂದಿಗೆ ಸುಭಾ ಹೋನೆ ನಾ ದೇ ಹಾಡಿನೊಂದಿಗೆ ತಮ್ಮ‌ ಕರಿಯರ್ ಆರಂಭಿಸಿದ್ದಾರೆ.

ಅಲ್ಲದೇ, ನಟ ಟೈಗರ್ ಶ್ರಾಫ್, ಸೂರಜ್ ಪಾಂಚೋಲಿ ಅವರೊಂದಿಗೆ ಮ್ಯೂಜಿಕ್ ಆಲ್ಬಂ ಕೂಡ ಮಾಡಿದ್ದಾರೆ.

 

Leave a Comment