ಬ್ರೆಜಿಲ್‌ನಲ್ಲಿ ಅಣೆಕಟ್ಟು ದುರಂತ  ಮೃತರ ಸಂಖ್ಯೆ 142 ಕ್ಕೆ ಏರಿಕೆ

 

 

ರಿ ಯೋ ಡಿ ಜನೈರೋ.ಫೆ.೬-ಕಳೆದ ತಿಂಗಳು ಬ್ರೆಜಿಲ್‌ನಲ್ಲಿ ನಡೆದ ಅಣೆಕಟ್ಟು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 142 ಕ್ಕೆ ಏರಿಕೆಯಾಗಿದೆ. 194 ಜನರು ಇನ್ನೂ ಕಣ್ಮರೆಯಾಗಿದ್ದಾರೆ ಎಂದು ಸ್ಥಳೀಯ ಪ್ರಾಧಿಕಾರ ಬುಧವಾರ ತಿಳಿಸಿದೆ.

 

ಗಣಿ ದಿಗ್ಗಜ ವಾಲೆ ಸ್ವಾಮ್ಯದ ಅಣೆಕಟ್ಟಿನಲ್ಲಿ ಜ 25 ರಂದು ನಡೆದ ದುರಂತದಲ್ಲಿ ಈವರೆಗೆ 142 ಮೃತದೇಹಗಳು ದೊರೆತಿದ್ದು, 122 ದೇಹಗಳ ಗುರುತು ಪತ್ತೆ ಹಚ್ಚಲಾಗಿದೆ.

ಸುಮಾರು 400 ಸಿಬ್ಬಂದಿ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

 

Leave a Comment