ಬ್ರಿಡ್ಜ್ ಗೇಮ್‌ನಲ್ಲಿ ಭಾರತಕ್ಕೆ ಸ್ವರ್ಣ

ಜಕಾರ್ತ, ಸೆ. ೧- ಏಷ್ಯನ್ ಗೇಮ್ಸ್‌ನ ಬ್ರಿಡ್ಜ್ ಗೇಮ್‌ನಲ್ಲಿ ಭಾರತದ ಪುರುಷರ ತಂಡ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ.

ಬಲಿಷ್ಠ ಚೀನಾ ವಿರುದ್ಧ ನಡೆದ ಫೈನಲ್‌ನಲ್ಲಿ ೬೦ ವರ್ಷದ ಪ್ರಣಬ್ ಬರ್ದನ್ ಹಾಗೂ ೫೬ ವರ್ಷದ ಶಿಬ್ನಾಥ್ ಸರ್ಕಾರ್ ಅವರು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಚೀನಾದ ಲಿಕ್ಸಿನ್ ಯಾಂಗ್ ಹಾಗೂ ಗಾಂಗ್ ಚೇನ್ ಅವರು ವಿರುದ್ಧ ಸೆಣಸಿದ ಭಾರತದ ಪ್ರಣಾಬ್ ಹಾಗೂ ಶಿಬ್ನಾಥ್ ಅವರು ೩೭೮ ಅಂಕ ಗಳಿಸುವ ಮೂಲಕ ಚಿನ್ನ ಗೆದ್ದಿದ್ದಾರೆ. ಇದರೊಂದಿಗೆ ಭಾರತ ೧೫ ಚಿನ್ನ, ೨೩ ಬೆಳ್ಳಿ, ೨೯ ಕಂಚು ಪದಕಗಳೊಂದಿಗೆ ೬೭ ಪದಕಗಳನ್ನು ಪಡೆದಿದ್ದು, ಪದಕ ಪಟ್ಟಿಯಲ್ಲಿ ಭಾರತ ೮ನೇ ಸ್ಥಾನ ಗಳಿಸಿದೆ.

Leave a Comment