ಬ್ರಿಟಿಷ್ ವಿಜ್ಞಾನಿ ಸ್ಟಿಫನ್ ಹಾಕಿಂಗ್ಸ್ ನಿಧನ

ನವದೆಹಲಿ. ಮಾ. ೧೪- ವಿಶ್ವವಿಖ್ಯಾತ ಭೌತ ವಿಜ್ಞಾನಿ ಹಾಗೂ ಖಗೋಳ ಶಾಸ್ತ್ರಜ್ಞ ಬ್ರಿಟನ್ನಿನ ಸ್ಟಿಫನ್ ಹಾಕಿಂಗ್ ಇಂದಿಲ್ಲಿ ನಿಧನರಾದರು. ಅವರಿಗೆ 76 ವರ್ಷಗಳಾಗಿದ್ದವು.

1963ರಲ್ಲಿ ಅವರು 21 ವರ್ಷದ ಯುವಕನಾಗಿದ್ದಾಗಲೇ ಆಮ್ಯಾ ಟ್ರೋಫಿಕ್ ಲ್ಯಾಟೆರಲ್ ಸ್ಕ್ಲೀರೊಸಿಸ್ (ಮೊಟಾರ್ ನ್ಯೂರಾನ್ ರೋಗ)ಎಂಬ ನಿಧಾನವಾಗಿ ಆವರಿಸಿಕೊಳ್ಳುವ ಮತ್ತು ವಾಸಿಯಾಗದ ರೋಗ ಅವರಿಗೆ ತಗುಲಿತ್ತು. ಈ ರೋಗ ಹತ್ತಾರು ವರ್ಷಗಳ ಕಾಲ ಅವರಲ್ಲಿ ಹರಡಿ ಪಾರ್ಶ್ವವಾಯುವಿಗೆ ತುತ್ತಾದರು.

1963ಕ್ಕೂ ಮೊದಲೇ ಹಾಕಿಂಗ್ ಅವರಿಗೆ  ರೋಗ ಬಂದಿದ್ದರೂ ಪತ್ತೆಯಾದದ್ದು ಮಾತ್ರ ಆಗ.

ಈ ಭೌತ ವಿಜ್ಞಾನಿಗೆ 13 ಗೌರವ ಪದವಿಗಳಿದ್ದವು. 1982ರಲ್ಲಿ ಅವರಿಗೆ ಸಿಬಿಇ, 1989ರಲ್ಲಿ ಕಂಪಯಾನಿಯಾನ್ ಆಫ್ ಆನರ್ ಮತ್ತು 2009ರಲ್ಲಿ ಕಂಪ್ಯಾನಿಯನ್ ಆಫ್ ಆನರ್ ಮತ್ತು 2009ರಲ್ಲಿ ಅಧ್ಯಕ್ಷೀಯ ಸ್ವಾತಂತ್ರ್ಯ ಪದಕ ನೀಡಿ ಗೌರವಿಸಲಾಗಿತ್ತು.

ಎಲ್ಲಕ್ಕಿಂತ ಮುಖ್ಯವಾಗಿ 2013ರಲ್ಲಿ ಮೂಲಭೌತ ವಿಜ್ಞಾನ ಪ್ರಶಸ್ತಿ, 2006ರಲ್ಲಿ ಕೊಪ್ಲೆ ಪದಕ ಮತ್ತು 1988ರಲ್ಲಿ ವೂಲ್ಫ್ ಪ್ರತಿಷ್ಠಾನ ಪ್ರಶಸ್ತಿ ವಿಜೇತರಾಗಿದ್ದು, ರಾಯಲ್ ಸೊಸೈಟಿಯ ಫೆಲೊ‌ಶಿಪ್ ಹಾಗೂ ಅಮೆರಿಕಾದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಸದಸ್ಯರು ಆಗಿದ್ದರು.

`ನಮ್ಮ ಪ್ರೀತಿಯ ತಂದೆ ನಿಧನರಾಗಿರುವರೆಂಬುದನ್ನು ತಿಳಿಸಲು ನಮಗೆ ಅತೀವ ದುಃಖವಾಗುತ್ತಿದೆ’ಎಂದು ಅವರ ಮಕ್ಕಳಾದ ಲೂಸಿ, ರಾಬರ್ಟ್ ಮತ್ತು ಟಿಮ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

`ಅವರೊಬ್ಬ ಮಹಾನ್ ವಿಜ್ಞಾನಿ ಹಾಗೂ ಅಸಾಮಾನ್ಯ ವ್ಯಕ್ತಿಯಾಗಿದ್ದು, ಅವರ ಕೆಲಸಗಳು ಹಾಗೂ ನಿಲುವುಗಳು ಬಹುಕಾಲ ಉಳಿಯುವಂಥವು. ಅವರ ಧೈರ್ಯ ಮತ್ತು ಹಾಸ್ಯಪ್ರಜ್ಞೆ ಜಗತ್ತಿನಾದ್ಯಂತ ಪ್ರಸಿದ್ಧವಾದವು’ ಎಂದೂ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Comment