ಬ್ರಾಹ್ಮಣ ಮಹಾಸಭಾ – ಕಿಟ್ ವಿತರಣೆ

ರಾಯಚೂರು.ಮೇ.24- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಮತ್ತು ಮಾನ್ವಿ ತಾಲೂಕಿನ ಘಟಕ ವತಿಯಿಂದ ಕೊರೊನಾ ಆರ್ಥಿಕ ಬಾಧಿತ ಬ್ರಾಹ್ಮಣ ಅರ್ಚಕರು, ಅಡುಗೆ ಕೆಲಸದವರಿಗೆ ಆಹಾರ ಕಿಟ್ ವಿತರಿಸಲಾಯಿತು.
ಸುಮಾರು 60 ಕುಟುಂಬಗಳಿಗೆ ದಿನಸು ವಿತರಿಸಲಾಯಿತು. ಮೇ.23 ರಂದು ಸಂಜೆ 6 ಗಂಟೆಗೆ ಮಾನ್ವಿ ನಗರದ ನಾರಾಯಣ ತೀರ್ಥ ಆಶ್ರಮದಲ್ಲಿ ವಿತರಿಸಲಾಯಿತು. ಜಿಲ್ಲಾಧ್ಯಕ್ಷರಾದ ಜಗನ್ನಾಥ ಕುಲಕರ್ಣಿ, ಗುರುರಾಜ ಆಚಾರ್, ಮುದ್ದು ರಂಗರಾವ್ ಮುತಾಲಿಕ್, ನರಸಿಂಹಮೂರ್ತಿ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share

Leave a Comment