ಬ್ರಾಹ್ಮಣ, ಆರ್ಯವೈಶ್ಯ ಸಮಾಜಕ್ಕೆ ಬಿಜೆಪಿ ಅನ್ಯಾಯ

ರಾಯಚೂರು.ಆ.22- ಭಾರತೀಯ ಜನತಾ ಪಕ್ಷದಿಂದ ಬ್ರಾಹ್ಮಣರು ಮತ್ತು ಆರ್ಯವೈಶ್ಯ ಸಮಾಜಕ್ಕೆ ಅನ್ಯಾಯವಾಗಿದೆಂದು ಪ್ರದೀಪಕುಮಾರ ಅವರು ಆರೋಪಿಸಿದ್ದಾರೆ.
ವಾರ್ಡ್ 9, ವಾರ್ಡ್ 17, ವಾರ್ಡ್ 21 ರಲ್ಲಿ ಬ್ರಾಹ್ಮಣ ಮತ್ತು ಆರ್ಯವೈಶ್ಯ ಸಮಾಜದ ಜನ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಶಾಸಕ ಡಾ.ಶಿವರಾಜ್ ಪಾಟೀಲ್ ಅವರು, ನಗರಸಭೆ ಚುನಾವಣೆಯಲ್ಲಿ ಬ್ರಾಹ್ಮಣರು ಮತ್ತು ಆರ್ಯವೈಶ್ಯ ಸಮಾಜಕ್ಕೆ ಒಟ್ಟು ಮೂರು ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ, ಎರಡು ಸಮುದಾಯಗಳಿಗೆ 35 ವಾರ್ಡಿನಲ್ಲಿ ಎಲ್ಲಿಯೂ ಸಹ ಒಂದೇ ಒಂದು ಟಿಕೆಟ್ ನೀಡದೆ ಬಿಜೆಪಿ ವಂಚಿಸಿದೆ.
ಇತ್ತೀಚಿಗೆ ಬ್ರಾಹ್ಮಣ ಸಮಾಜ ಸಭೆಯಲ್ಲಿ ಈ ವಿಷಯ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಡಾ.ಆನಂದ ಫಡ್ನೀಸ್ ಅವರು ಟಿಕೆಟ್ ಪ್ರಯತ್ನಿಸಿದ್ದರು. ಆದರೆ, ಅವರಿಗೆ ಟಿಕೆಟ್ ನೀಡಲು ನಿರಾಕರಿಸಿರುವುದು ಬ್ರಾಹ್ಮಣ ಸಮಾಜ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ. ಬಿಜೆಪಿ ಪಕ್ಷ ಎರಡು ಸಮುದಾಯಗಳನ್ನು ಕೇವಲ ಮತ ಬ್ಯಾಂಕ್‌ನ್ನಾಗಿ ಬಳಸಿಕೊಳ್ಳುತ್ತಿದೆ. ಆದರೆ, ಚುನಾವಣಾ ರಾಜಕೀಯದಲ್ಲಿ ಎರಡು ಸಮುದಾಯಗಳನ್ನು ದೂರವಿಡಲಾಗುತ್ತಿದೆ.
ಬ್ರಾಹ್ಮಣ ಮತ್ತು ಆರ್ಯವೈಶ್ಯ ಸಮಾಜದ ಪರ ಬಿಜೆಪಿ ಧೋರಣೆಯನ್ನು ತೀವ್ರವಾಗಿ ಖಂಡಿಸಿದ ಅವರು, ನಗರಸಭೆ ಚುನಾವಣೆಯಲ್ಲಿ ಎರಡು ಸಮುದಾಯಗಳು ತಕ್ಕಪಾಠ ಕಲಿಸಲಿವೆ.

Leave a Comment