ಬ್ರಹ್ಮಕುಮಾರಿ ಸೋದರಿಯರಿಂದ ಪೊಲೀಸರಿಗೆ ಪ್ರಸಾದ ವಿತರಣೆ

ಧಾರವಾಡ,ಏ.2- ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ  ಬ್ರಹ್ಮಕುಮಾರಿ ಸೋದರಿಯರ ವತಿಯಿಂದ ಪೊಲೀಸ ಅಧಿಕಾರಿಗಳಿಗೆ ನಿತ್ಯ ಉಪಹಾರದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಧಾರವಾಡದ ಉಪನಗರ ಪೊಲೀಸ ಠಾಣೆ, ಶಹರ ಪೊಲೀಸ್ ಠಾಣೆ ಹಾಗೂ ಇನ್ನಿತರ ಠಾಣೆಯ ಪೊಲೀಸರಿಗೆ ಪ್ರಸಾದ ವಿತರಿಸಿ ಸದಾ ರಕ್ಷಣೆಗೆ ನಿಲ್ಲುವ ಅವರಿಗೆ ಆರೋಗ್ಯ ಆಯುಷ್ಯ ನೀಡಲಿ ಎಂದು ಶುಭ ಹಾರೈಸಿದರು.
ಬ್ರಹ್ಮಕುಮಾರಿ ಸಹೋದರಿಯಾದ ಸ್ಥಳೀಯ ಕೇಂದ್ರ ಸಂಚಾಲಕಿ ರಾಜಯೋಗಿನಿ  ವಿ.ಕೆ. ಜಯಂತಿ ಅಕ್ಕನವರು ಸುಮಾರು 250 ಪೊಲೀಸರಿಗೆ ಪ್ರಸಾದ ವಿತರಿಸಿ ಮಾತನಾಡಿದ ಅವರು ಹಿಂದಿನ ಸಮಯದ ನಮ್ಮ ನಾಡಿದ ವಾತಾರವಣವನ್ನು ಗಮನಿಸಿದಾಗ ಸರ್ಕಾರದ ಆದೇಶವನ್ನು ಪಾಲಿಸಿ, ಜನತೆ ನಮ್ಮ ದೇಶಕ್ಕೆ ಕೊಡುವ ಗೌರವ ಪ್ರತ್ಯೆಕ್ಷವಾಗಿದ್ದು ಇನ್ನೊಂಡೆ ಮಾಧ್ಯಮದವರು ಮಹಾಮಾರಿ ಕೊರೊನಾ ವೈರಸ್ ಮಾಹಿತಿಯನ್ನು ನಿರಂತರವಾಗಿ ಕೊಡುತ್ತಿದ್ದು ಶಾಘ್ಲನೀಯ ಎಂದರು.
ಕೊರೊನಾ ವೈರಸ್ ನ್ನು ಎಲ್ಲರೂ ಒಗ್ಗಟಾಗಿ ಎದುರುಸಬೇಕು ಎಂದರು. ಮನಸ್ಸಿನಲ್ಲಿ ಚಿಂತೆ, ಭಯ ಬೇಡ ಗಾಬರಿ ವಿಚಾರಗಳು ಕ್ಯಾಟಕೊಲಮೈನ್ಸ ಎನ್ನುವ ಹಾರ್ಮೋನಗಳನ್ನು ಬಿಡುಗಡೆ ಮಾಡಿ ರೋಗ ನಿರೋಧಕ ಶಕ್ತಿ ಕಡಿಮೆ ಯಾಗುವಂತೆ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿಯೂ ಆತ್ಮವಿಶ್ವಾಸ ದೃಢವಾಗಿರಬೇಕು. ಆತ್ಮ ಶಕ್ತಿ ಇದ್ದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಾರ್ಟಿಸಾಲ ಎನ್ನುವ ಹಾರ್ಮೋನ್ ಬಿಡುಗಡೆಯಾಗುತ್ತದೆ.
ಬ್ರಹ್ಮಾಕುಮಾರಿಯರುಈಶ್ವರೀಯ ವಿಶ್ವ ವಿದ್ಯಾಲಯದತಮ್ಮತಮ್ಮ ಶಾಖೆಗಳಲ್ಲಿ ಮೆಡಿಟೇಶನ್ ಮಾಡುವುದು ಮಾತ್ರವಲ್ಲ, ಸಂಸಾರಸ್ಥರುತಮ್ಮತಮ್ಮ ಮನೆಯಲ್ಲಿ ಪೀಸ್‍ಆಫ್ ಮೈಂಡ್ ಮತ್ತುಅವೇಕನಿಂಗ್ ಚಾನಲಗಳಲ್ಲಿ ಬರುವಜ್ಞಾನ ತರಗತಿಗಳನ್ನು ಆಲಿಸಿರಿ ಮತ್ತು ಮನೆಯಲ್ಲಿಎಲ್ಲರೂಎಕಕಾಲದಲ್ಲಿರಾಜಯೋಗಧ್ಯಾನ ಮಾಡಿರಿ. ಗೃಹಸ್ಥನ ಮನೆ ಗೃಹಸ್ಥಾಶ್ರಮವಾಗಲಿ, ಶಾಂತಿಕುಂಡವಾಗಲಿ, ಆರೋಗ್ಯವಂತಾಗಲಿ ಎಂದರು.
ವೈರಸ್ ತಡೆಗೆ   ಮನೆಯಲ್ಲಿದ್ದು ಮನೆಯ ಔಷಧಿಗಳನ್ನು ಉಪಯೋಗಿಸುವುದು ಅತ್ಯಗತ್ಯ ಎಂದು ಕರೆ ನೀಡಿದರು.  ಈ ಸಂದರ್ಭದಲ್ಲಿ ಬಿ.ಕೆ. ವಾಣಿ ಅಕ್ಕ, ಬಿ.ಕೆ. ರೋಹಿಣಿ ಅಕ್ಕ, ಈಶ್ವರಿಯ ಸೇವಾ ಅಧಿಕಾರಿಗಳಾದ
ಈಶ್ವರೀಯ ಸೇವಾಧಾರಿಗಳಾದ ಸುಭಾಸಕಟ್ಟಿಮನಿ, ಆನಂದಕಿತ್ತೂರ, ಜಯಪ್ರಕಾಶ, ಪ್ರವೀಣ ಶೆಟ್ಟಿ, ಅರವಿಂದ ಇನ್ನಿತರರು ಉಪಸ್ಥಿತರಿದ್ದರು.

Leave a Comment