ಬ್ರಸೆಲ್ಸ್‌ ನಲ್ಲಿ ಅನುಷ್ಕಾ ಸುತ್ತಾಟ

ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯುಸಿಯಿದ್ದಾರೆ. ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಕೊಹ್ಲಿ ಇಲ್ಲದೆ ಬ್ರಸೆಲ್ಸ್‌ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಅನುಷ್ಕಾ ಕೆಲಸಕ್ಕಾಗಿ ಬ್ರಸೆಲ್ಸ್‌ ಗೆ ತೆರಳಿದ್ದಾರೆ. ಬಿಡುವಿನ ಸಮಯದಲ್ಲಿ ನಗರ ಸುತ್ತುತ್ತಿದ್ದಾರೆ.

ಬ್ರಸೆಲ್ಸ್‌ನಲ್ಲಿ ರೈಲು ಪ್ರಯಾಣವನ್ನು ಎಂಜಾಯ್ ಮಾಡ್ತಿರುವ ಅನುಷ್ಕಾ ಅದ್ರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅನುಷ್ಕಾ ಈ ಫೋಟೋಕ್ಕೆ ಅಭಿಮಾನಿಗಳು ಲೈಕ್ ಒತ್ತುತ್ತಿದ್ದಾರೆ. ಅನುಷ್ಕಾ ಹೊಸ ಹೇರ್ ಸ್ಟೈಲ್ ಅನೇಕರಿಗೆ ಇಷ್ಟವಾಗಿದೆ.

ಕೆಲ ದಿನಗಳ ಹಿಂದೆ ಕೊಹ್ಲಿ ಇನ್ಸ್ಟ್ರಾಗ್ರಾಮ್ ಅಕೌಂಟ್ ಗೆ ಹಾಕಿದ್ದ ಅನುಷ್ಕಾ-ಕೊಹ್ಲಿ ಫೋಟೋ ಒಂದು ಸದ್ದು ಮಾಡಿತ್ತು. ಲಂಡನ್ ನಲ್ಲಿ ಓಲ್ಡ್ ಬಾಂಡ್ ಸ್ಟ್ರೀಟ್ ನಲ್ಲಿ ಕೊಹ್ಲಿ ಜೊತೆ ಅನುಷ್ಕಾ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದರು. ಈ ಫೋಟೋ ಸಾಕಷ್ಟು ವಿವಾದಗಳನ್ನೂ ಹುಟ್ಟುಹಾಕಿತ್ತು.

 

Leave a Comment