ಬ್ಯೂಟಿಫುಲ್ ಮನಸುಗಳು ಸಮಾಜದ ಕನ್ನಡಿ

ನೀನಾಸಂ ಸತೀಶ್ ಬ್ಯೂಟಿಫೂಲ್ ಮನಸುಗಳು ಚಿತ್ರವನ್ನು ಪ್ರತಿಯೊಬ್ಬರು ನೋಡಲೇ ಬೇಕು ಚಿತ್ರ ಹಿಟ್ ಆಗಬೇಕು ಎಂದು ಬಯಸುತ್ತಿದ್ದಾರೆ. ಇದು ನಾಯಕರಾಗಿದ್ದಾರೆ ಎನ್ನುವ ಕಾರಣಕ್ಕೆ ಮಾತ್ರವಲ್ಲ ಅವರ ಪ್ರಕಾರ ಚಿತ್ರದ ಕಥೆ ಇಡೀ ಸಮಾಜಕ್ಕೆ ಕನ್ನಡಿಯಾಗಿದೆ.

೨೦೧೩ರಲ್ಲಿ ಮಂಗಳೂರಿನಲ್ಲಿ ನಡೆದ ಘಟನೆಯನ್ನು ಆಧರಿಸಿ ಮಾಡಿರುವ ಕಥೆ ಹೆಣ್ಣಿಗೆ ನಡೆಯುವ ಅನ್ಯಾಯದಿಂದ ಇಡೀ ಕುಟುಂಬ ಬೀದಿ ಪಾಲಾಯಿತು ಆ ಕುಟುಂಬದ ಜೊತೆ ಸದಾ ನಾವಿದ್ದೇವೆ ಎಂದು ಹೇಳುವ ಪ್ರಯತ್ನವೂ ಚಿತ್ರದ ಮೂಲಕ ಆಗಿದೆ. ಹೀಗಾಗಿ ಚಿತ್ರ  ಹೆಣ್ಣು ಮಕ್ಕಳಿಗೆ ಸಮರ್ಪಿತವಾದೆ ಇಂಥ ಸಿನೆಮಾಗಳನ್ನು ಜನ ಗೆಲ್ಲಿಸಬೇಕು ಎನ್ನುವುದು ಅವರ ಸಾಮಾಜಿಕ ಕಳಕಳಿಯೂ ಆಗಿದೆ.

ನಿರ್ದೇಶಕ ಜಯತೀರ್ಥ ಒಲವೆ ಮಂದಾರ ಚಿತ್ರದ  ನಂತರ ಬ್ಯೂಟಿಫುಲ್ ಮನಸುಗಳು ಚಿತ್ರಕ್ಕಾಗಿ ಉತ್ತಮ ಕಥೆ ಮಾಡಿದ್ದಾರೆ ಎನ್ನುವುದು ಅವರ ಅಭಿಪ್ರಾಯವೂ ಹೌದು. ಕಥೆ ಭಿನ್ನವಾಗಿರುವುದರಿಂದಾಗಿಯೇ ಈ ಪಾತ್ರವನ್ನು ಒಪ್ಪಿಕೊಂಡಿದ್ದಾರಂತೆ.

ಇದೊಂದು ಮಹಿಳಾ ಪ್ರಧಾನ ಚಿತ್ರ ಎನ್ನುವುದಕ್ಕಿಂತಲೂ ವಿಭಿನ್ನವಾದ ಲವ್ ಸ್ಟೋರಿಯೂ ಇದೆ ತಮ್ಮ ಪಾತ್ರ ಯಾವ ತರಹದ್ದು ಎನ್ನುವುದು ಚಿತ್ರ ನೋಡಿದಾಗಷ್ಟೇ ಪ್ರೇಕ್ಷಕರಿಗೆ ಗೊತ್ತಾಗಲಿ ಎನ್ನುವ ಸಸ್ಪೆನ್ಸ್ ಕೊಡುತ್ತಾರೆ. ಯೋಗ್‌ರಾಜ್‌ಭಟ್ ಮತ್ತು ಪವನ್ ನಿರ್ದೇಶನದಲ್ಲಿ ಮಾತ್ರವಲ್ಲ ಬೇರೆ ನಿರ್ದೇಶಕರ ಜೊತೆ ಕೆಲಸ ಮಾಡಿರುವ ತಮ್ಮ ಚಿತ್ರಗಳು ಯಶಸ್ಸು ಕಂಡಿವೆ.

ಪ್ರತಿಯೊಬ್ಬ ನಿರ್ದೇಶಕರ ಜೊತೆ ಕೆಲಸ ಮಾಡಿದಾಗಲು ಹೊಸ ವಿಚಾರಗಳನ್ನು ಕಲಿಯುತ್ತಲೇ ಇದ್ದೇನೆ ಎನ್ನುವ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಉತ್ತಮ ನಟ ಎಂದು ದಾಖಲಿಸಿಕೊಂಡವರು.

ಸದ್ಯಕ್ಕೆ ಬ್ಯೂಟಿಫುಲ್ ಮನಸುಗಳು ಚಿತ್ರವನ್ನು ಗೆಲ್ಲಿಸುವ ಪ್ರಚಾರದ ಬಿಜಿಯಲ್ಲಿದ್ದು, ಶೇಕಡ ೮೦ರಷ್ಟು ಚಿತ್ರೀಕರಣ ಪೂರ್ಣಗೊಳಿಸಿರುವ ಟೈಗರ್ ಗಲ್ಲಿ ಮತ್ತು ಚಂಬಲ್ ಚಿತ್ರಗಳು ಸೇರಿದಂತೆ ಈ ವರ್ಷದ ಕೊನೆಯ ವೇಳೆಗೆ ತಮ್ಮ ೫ ಚಿತ್ರಗಳು ಬಿಡುಗಡೆಯಾಗುತ್ತವೆ ಎನ್ನುವ ಯೋಜನೆಯಲ್ಲಿದ್ದಾರೆ. ಬ್ಯೂಟಿಫುಲ್ ಮನಸುಗಳು ಮತ್ತು ೨೦೧೭ ಹೊಸ ವರ್ಷ ಅವರಿಗೆ ಏನು ಕೊಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Leave a Comment