‘ಬ್ಯೂಟಿಪಾರ್ಲರ್ ಕ್ಷೇತ್ರದಲ್ಲಿ ಸ್ವಉದ್ಯೋಗಕ್ಕೆ ಅವಕಾಶ’

ಉಜಿರೆ, ಸೆ.೪- ಬ್ಯೂಟಿಪಾರ್ಲರ್ ಕ್ಷೇತ್ರದಲ್ಲಿ ಸ್ವಉದ್ಯೋಗಕ್ಕೆ ತುಂಬಾ ಅವಕಾಶಗಳಿವೆ. ನೀವು ಪಡೆದಿರುವ ಈ ತರಬೇತಿಯಲ್ಲಿ ಸ್ವಲ್ಪ ಅನುಭವ ಪಡೆದು ಸ್ವ ಉದ್ಯೋಗ ಆರಂಭಿಸಿದಲ್ಲಿ ಯಶಸ್ಸು ಖಂಡಿತ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರ ಕುಮಾರ್ ಅವರು ಅಭಿಪ್ರಾಯಪಟ್ಟರು.
ಅವರು ಸಂಸ್ಥೆಯಲ್ಲಿ ನಡೆದ ಬ್ಯೂಟಿ ಪಾರ್ಲರ್ ಮೆನೇಜ್‌ಮೆಂಟ್ ತರಬೇತಿಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡಿದರು. ನಿರ್ದೇಶಕರಾದ ವಿನಯ್ ಕುಮಾರ್ ರವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಬ್ಯೂಟಿಪಾರ್ಲರ್ ಮೆನೇಜ್‌ಮೆಂಟ್ ತರಬೇತಿಯ ಅತಿಥಿ ಉಪನ್ಯಾಸಕಿ ಮಾಧವಿ ರೈ ರವರು ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕರಾದ ಅನಸೂಯ ಕಾರ್ಯಕ್ರಮ ನಿರೂಪಿಸಿ, ಅಬ್ರಹಾಂ ಜೇಮ್ಸ್ ವಂದಿಸಿದರು. ಸಂಸ್ಥೆಯಲ್ಲಿ ತರಬೇತಿಯನ್ನು ಪಡೆಯುತ್ತಿರುವ ಕಂಪ್ಯೂಟರ್ ಡಿ.ಟ.ಪಿ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Leave a Comment