ಬ್ಯಾನ್ ಆಗಿ 2 ವರ್ಷವಾದ್ರೂ ಹಳೆಯ ನೋಟುಗಳು ಪತ್ತೆ

ಮಂಡ್ಯ: ಜ.12- ನೋಟ್ ಬ್ಯಾನ್ ಆಗಿ ಎರಡು ವರ್ಷ ಕಳೆದರೂ ಭಕ್ತರು ಮಾತ್ರ ತಮ್ಮಲ್ಲಿರುವ ಹಳೆಯ ನೋಟುಗಳನ್ನು ದೇವಾಲಯದ ಹುಂಡಿಗೆ ಹಾಕುತ್ತಿದ್ದಾರೆ.
ಜಿಲ್ಲೆಯ ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯದ ಹುಂಡಿಯಲ್ಲಿ ಹಳೆಯ ನೋಟುಗಳು ಪತ್ತೆಯಾಗಿದೆ. ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯದಲ್ಲಿ ನಿನ್ನೆ ಹುಂಡಿ ಎಣಿಕೆ ಕಾರ್ಯ ನಡೆಸಲಾಗಿದೆ. ಹುಂಡಿಯಲ್ಲಿ ಸುಮಾರು 39 ಲಕ್ಷ ಹಣ ಸಂಗ್ರಹವಾಗಿತ್ತು.
ಚಿನ್ನ, ಬೆಳ್ಳಿ ಸೇರಿದಂತೆ, ಅಮೆರಿಕ, ಮಲೇಷಿಯ ಹಾಗೂ ವಿವಿಧ ದೇಶಗಳ ಕರೆನ್ಸಿ ಕೂಡ ಸಂಗ್ರಹವಾಗಿತ್ತು. ಈ ವೇಳೆ ಹುಂಡಿಯಲ್ಲಿ 500 ರೂಪಾಯಿಯ 12 ಹಳೇ ನೋಟುಗಳು ಮತ್ತು ಸಾವಿರ ರೂಪಾಯಿಯ ಮೂರು ಹಳೇ ನೋಟುಗಳು ಪತ್ತೆಯಾಗಿವೆ.
ಹಳೆಯ 500 ಮತ್ತು 1000 ರೂಪಾಯಿಯ ನೋಟುಗಳು ನಿಷೇಧವಾಗಿ ಎರಡು ವರ್ಷ ಕಳೆದರೂ ದೇವರ ಹುಂಡಿಯಲ್ಲಿ ಮಾತ್ರ ಹಳೇ ನೋಟುಗಳು ಪತ್ತೆಯಾಗಿದ್ದು ವಿಶೇಷವಾಗಿತ್ತು. ಅಂದರೆ ಜನರು ತಮ್ಮ ಬಳಿ ಇರುವ ಹಳೆಯ ನೋಟುಗಳನ್ನು ಬೇರೆ ಕಡೆ ಕೊಡಲು ಸಾಧ್ಯವಾಗದೇ ಈ ರೀತಿಯಾಗಿ ದೇವರ ಹುಂಡಿಯಲ್ಲಿ ಹಾಕುತ್ತಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

Leave a Comment