ಬ್ಯಾಡ್ಮಿಂಟನ್ ಆಟಗಾರ್ತಿ ಸಿಂಧುವಿನಿಂದ ಸ್ಟೇಫ್ರಿ ಪ್ರಚಾರ

ಬೆಂಗಳೂರು, ಮಾ. ೯- ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯು ತನ್ನ ಸ್ಯಾನಿಟರಿ. ನ್ಯಾಪ್‌ಕಿನ್ ಬ್ರಾಂಡ್ ಸ್ಟ್ರೇಫ್ರಿಯ `ಡೀಮ್ಸ್ ಆಫ್ ಪ್ರೋಗ್ರೇಸ್` ಅಭಿಯಾನವನ್ನು ಪ್ರಕಟಿಸಿದೆ.
ಡ್ರೀಮ್ಸ್ ಆಫ್ ಪ್ರೋಗ್ರೇಸ್ ಅಭಿಯಾನವನ್ನು ಕಂಪನಿಯ ಪ್ರಚಾರ ರಾಯಭಾರಿಯಾಗಿರುವ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧುರವರು ಹೈದರಾಬಾದ್‌ನ ಅಲ್ಮಾಮೇಟರ್‌- ಆಕ್ಸಿಲಿಯಮ್ ಹೈಸ್ಕೂಲ್‌ನಲ್ಲಿ ನಡೆದ ಸಮಾರಂಭದಲ್ಲಿ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದ ಸಿಂಧು ತಮ್ಮ ವೈಯಕ್ತಿಕ ಯಶೋಗಾಧೆ ಮತ್ತು ಅನುಭವಗಳ ಮೂಲಕ ಸ್ಪೂರ್ತಿ ತುಂಬಿದರು.
ಅಭಿಯಾನ ಕುರಿತು ಮಾತನಾಡಿದ ಅವರು ಋತುಸ್ರಾವದ ಅವಧಿಯಲ್ಲಿ ಹೆಣ್ಣು ಮಕ್ಕಳು ಆತಂಕಕ್ಕೆ ಒಳಗಾಗುತ್ತಾರೆ. ಈ ಅಭಿಯಾನವು ಹೆಣ್ಣು ಮಕ್ಕಳು ಮನೋಸ್ಥಿತಿಯನ್ನು ಗಟ್ಟಿ ಗೊಳಿಸುತ್ತದೆ ಎಂದರು.
ಜಾನ್ಸನ್ ಅಂಡ್ ಜಾನ್ಸನ್ ಇಂಡಿಯಾದ ಮಾರಾಟ ಗ್ರಾಹಕ ಉತ್ಪನ್ನ ವಿಭಾಗಗಳ ಉಪಾಧ್ಯಕ್ಷ ಡಿಂಪಲ್ ಶ್ರೀಧರ್ ಮಾತನಾಡಿ ಎಳೆ ಹೆಣ್ಣು ಮಕ್ಕಳು ತಮ್ಮ ಋತುಸ್ರಾವದ ಅವಧಿಯಲ್ಲಿ ಕೂಡ ತಮ್ಮ ಕನಸುಗಳನ್ನು ಸ್ಥಗಿತವಾಗದಂತೆ ಸ್ಪೂರ್ತಿ ತುಂಬುತ್ತದೆ ಎಂದು ತಿಳಿಸಿದ್ದಾರೆ.
ವೀಲ್ಸನ್ ಅಂಕಿ- ಅಂಶಗಳ ಪ್ರಕಾರ ಭಾರತೀಯ ಸ್ಯಾನಿಟರಿ ನ್ಯಾಪ್‌ಕಿನ್ ಮಾರುಕಟ್ಟೆ ಸುಮಾರು ನಾಲ್ಕು ಸಾವಿರ ಕೋಟಿ ರೂ. ತಲುಪಿದೆ.

Leave a Comment