ಬೌಲರ್ ಗಳ ಮೇಲೆ ನಿಯಂತ್ರಣ ಸಾಧಿಸಲು ಧೋನಿ ಯತ್ನಿಸುತ್ತಿದ್ದರು: ಇರ್ಫಾನ್ ಪಠಾಣ್

ನವದೆಹಲಿ, ಜೂನ್ 28 -2007ರಲ್ಲಿ ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ನಾಯಕತ್ವದ ವಹಿಸಿಕೊಂಡ ಆರಂಭದಲ್ಲಿ ಬೌಲರ್ ಗಳ ಮೇಲೆ ನಿಯಂತ್ರಣ ಸಾಧಿಸಲು ಬಯಸುತ್ತಿದ್ದರು. ಆದರೆ 2013ರ ವೇಳೆಗೆ ಶಾಂತ ಸ್ವಭಾವಾದ ನಾಯಕ ಇಮೇಜ್ ಬೆಳೆಸಿಕೊಂಡಿದ್ದ ಅವರು ಬೌಲರ್ ಗಳ ಮೇಲೆ ನಂಬಿಕೆ ಹೊಂದಿದ್ದರು ಎಂದು ಟೀಮ್ ಇಂಡಿಯಾದ ಮಾಜಿ ಮಧ್ಯಮ ವೇಗಿ ಇರ್ಫಾನ್ ಪಠಾಣ್ ಹೇಳಿದ್ದಾರೆ.
ಧೋನಿ ನಾಯಕತ್ವದಲ್ಲಿ ಕಾಲ ಕಾಲಕ್ಕೆ ತಂದುಕೊಂಡ ಮಾರ್ಪಡುಗಳ ಕುರಿತು 35 ವರ್ಷದ ಇರ್ಫಾನ್ ಪಠಾಣ್, ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ಇರ್ಫಾನ್ ಈ ವರ್ಷದ ಆರಂಭದಲ್ಲಿ ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು.
2007ರಲ್ಲಿ ಮೊದಲ ಬಾರಿ ತಂಡವನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿ ತಮ್ಮ ಮೇಲಿದೆ ಎಂದು
ತಿಳಿದಾಗ ಧೋನಿ ಅವರು ರೋಮಾಂಚನಗೊಂಡಿದ್ದರು. 2007 ಹಾಗೂ 2013ರ ಚಾಂಪಿಯನ್ಸ್ ಟ್ರೋಪಿ ವೇಳೆ ತಂಡದ ಸಭೆಗಳು ಕೇವಲ ಐದು ನಿಮಿಷಕ್ಕೆ ಸೀಮಿತಗೊಂಡಿದ್ದವು ಎಂದು ಇರ್ಫಾನ್ ಹೇಳಿದ್ದಾರೆ. ನಾಯಕನಾಗಿದ್ದ ಆರಂಭದಲ್ಲಿ ಅವರು ಲವಲವಿಕೆಯಿಂದ ವಿಕೆಟ್ ಕೀಪಿಂಗ್ ಜಾಗದಿಂಗ್ ಬೌಲರ್ ಎಂಡ್ ಕಡೆಗೆ ಓಡುವುದರೊಂದಿಗೆ ಬೌಲರ್ ಗಳ ನಿಯಂತ್ರಣಕ್ಕೆ ಯತ್ನಿಸುತ್ತಿದ್ದರು. ಆದರೆ 2013ರ ವೇಳೆಗೆ ಬೌಲರ್ ಗಳ ಮೇಲೆ ವಿಶ್ವಾಸ ಬೆಳೆಸಿಕೊಂಡಿದ್ದರು ಎಂದು ಇರ್ಫಾನ್ ತಿಳಿಸಿದ್ದಾರೆ.

Share

Leave a Comment