ಬೋಸರಾಜು:`ಅಪ್ಪನ ದೂರು, ಮಗನ ಪ್ಯಾರ್`

ರಾಯಚೂರು.ಜ.13- ರಾಜಕೀಯದಲ್ಲಿ ಯಾರು ಮಿತ್ರರಲ್ಲಿ, ಶತ್ರು ಅಲ್ಲ ಎನ್ನುವ ಮಾತು ಚಾಲ್ತಿಯಲ್ಲಿದೆ. ಆದರೆ, ರಾಯಚೂರು ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ಅಪ್ಪ ಶತ್ರು ಎಂದೇ ಪರಿಗಣಿಸುವ ವ್ಯಕ್ತಿಯೊಂದಿಗೆ ಮಗ ಫೋಟೋ ತೆಗೆಸಿಕೊಂಡು ವಾಟ್ಸ್ ಅಪ್‌ನಲ್ಲಿ ಹರಿಬಿಡಲಾಗಿದೆ.
ನಿನ್ನೆ ಕೆಪಿಸಿಸಿ ರಾಜ್ಯಾಧ್ಯಕ್ಷ ಜಿ. ಪರಮೇಶ್ವರ ಅವರಿಗೆ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಅವರ ವಿರುದ್ಧ ಮಾಜಿ ಶಾಸಕ ಸೈಯದ್ ಯಾಸೀನ್ ಅವರು ಲಿಖಿತ ದೂರು ನೀಡಿದ್ದರು. ಈ ದೂರಿನಲ್ಲಿ ಬೋಸರಾಜು ಅವರು ತಮ್ಮ ಕ್ಷೇತ್ರದಲ್ಲಿ ನಕಾರಾತ್ಮಕ ಹಸ್ತಕ್ಷೇಪ ಮಾಡುತ್ತಿದ್ದಾರೆಂಮದು ಆರೋಪಿಸಿದ್ದರು. ಇವರಿಗೆ ಎಚ್ಚರಿಕೆ ಅಥವಾ ಸಲಹೆ ನೀಡುವ ಮೂಲಕ ಹಸ್ತಕ್ಷೇಪ ತಡೆಯಲು ಕೋರಿದ್ದರು.
ಆದರೆ, ಅವರ ಮಗ ವಕ್ಫ್ ಮಾಜಿ ಅಧ್ಯಕ್ಷ ಸೈಯದ್ ಸೋಹೆಲ್ ಅವರು ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಅವರ ಜೊತೆ ಫೋಟೋ ಇಳಿದು ವಾಟ್ಸ್ ಅಪ್‌ಗಳಲ್ಲಿ ಹರಿಬಿಟ್ಟಿರುವುದು ಗಮನಾರ್ಹವಾಗಿದೆ. `ಅಪ್ಪನ ದೂರು, ಮಗನ ಪ್ಯಾರ್` ಸ್ವತಃ ಬೋಸರಾಜು ಸೇರಿದಂತೆ ಬೆಂಬಲಿಗರಲ್ಲಿ ಒಂದು ರೀತಿಯ ಗೊಂದಲ ಮೂಡಿಸದಿರಲಾರದು.
ನಿನ್ನೆ ಮಹಿಳಾ ಸಮಾಜದಲ್ಲಿ ನಡೆದ ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದ ಕಾರ್ಯಕರ್ತರ ಸಭೆಯಲ್ಲಿ ಸೈಯದ್ ಸೋಹೆಲ್ ಅವರು ತಮ್ಮ ತಂದೆ ಯಾಸೀನ್ ಅವರಿಗಿಂತ ಹಿರಿಯರಾದ ಎನ್.ಎಸ್. ಬೋಸರಾಜು ಅವರ ಹೆಗಲ ಮೇಲೆ ಕೈ ಹಾಕಿದ ಚಿತ್ರ ವಾಟ್ಸ್ ಅಪ್‌ಗಳಲ್ಲಿ ಹರಿ ಬಿಟ್ಟಿರುವುದು ಈಗ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದು, ಈ ಚಿತ್ರದ ಬಗ್ಗೆ, ಎನ್.ಎಸ್. ಬೋಸರಾಜು ಅವರ ಬಗ್ಗೆ ಅಪ್ಪ ದೂರು ನೀಡಿದರೆ, ಮಗ ಬೋಸರಾಜು ಅವರೊಂದಿಗೆ ಇಳಿದ ಫೋಟೋ ಪ್ರಚಾರಕ್ಕೆ ಬಿಟ್ಟಿದ್ದಾರೆ.

Leave a Comment