ಬೋಲ್ಡ್ ಬೆಡಗಿ ರಚಿತಾ

ರಚಿತಾರಾಮ್ ಸ್ಯಾಂಡಲ್‌ವುಡ್‌ನ ಅತ್ಯಂತ ಬ್ಯುಸಿ ನಟಿ ಒಂದರಿಂದ ಒಂದರಂತೆ ಅವಕಾಶಗಳು ಆಕೆಯನ್ನು ಅರಸಿಬಂದಿವೆ.ಕನ್ನಡದ ಖ್ಯಾತ ನಾಯಕ ನಟರ ಜೊತೆ ನಟಿಸಿ ಹೆಸರು ಗಳಿಸಿರುವ ಗುಳಿಕೆನ್ನೆಯ ಬೆಡಗಿ ರಚಿತಾ,ಆಯೋಗ್ಯ ಚಿತ್ರದಲ್ಲಿ ಮಂಡ್ಯದ ಖಡಕ್ ಭಾಷೆಯಲ್ಲಿ ಡಬ್ಬಿಂಗ್ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಅಯೋಗ್ಯನಿಗೆ ನಾಯಕಿಯಾಗಿ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ಮಾತನಾಡೋದು ರಚಿತಾ ರಾಮ್‌ಗೆ ಕಷ್ಟವೇನಲ್ಲ. ಏಕೆಂದರೆ ರಚಿತಾ ಬೆಂಗಳೂರ ಬೆಡಗಿ. ಮಂಡ್ಯ ಕನ್ನಡ ಮಾತನಾಡೋದು ಸ್ವಲ್ಪ ಕಷ್ಟ ಆದರೂ ಅದನ್ನೇ ಸವಾಲಾಗಿ ಸ್ವೀಕರಿಸಿ ಡಬ್ಬಿಂಗ್ ಮಾಡಿದ್ದೇನೆ ಎನ್ನುತ್ತಾರೆ. ಮಂಡ್ಯ ಭಾಷೆಯಲ್ಲಿ ಸುಮಾರು ಮೂರೂವರೆ ಗಂಟೆ ಸಮಯದಲ್ಲಿ ತಮ್ಮ ಪಾಲಿನ ಡಬ್ಬಿಂಗ್ ಮುಗಿಸಿಬಿಟ್ಟಿದ್ದಾರಂತೆ ರಚಿತಾ.ಯಾವುದೋ ಒಂದು ಪದ ಬೇರೆ ತರಹ ಇತ್ತು. ಆದರೆ, ಮಂಡ್ಯ ಭಾಷೆಗೆ ಅದು ಸರಿಹೊಂದುತ್ತಿರಲಿಲ್ಲ. ಕೊನೆಗೆ ಅದನ್ನು ತಿಳಿದುಕೊಂಡು ಮಾಡಿದೆ ಎಲ್ಲರ ಸಹಕಾರದಿಂದ ಡಬ್ಬಿಂಗ್ ಸುಲಭವಾಯಿತು ಎಂದು ರಚಿತಾ ಸ್ಮರಿಸಿದರು.
ಇತ್ತೀಚೆಗೆ ಫಸ್ಟ್‌ಲುಕ್ ಬಿಡುಗಡೆಯಾಗಿರುವ”ಏಪ್ರಿಲ್ ಸಿನಿಮಾದಲ್ಲಿ ನಟನೆಗೆ ಮುಂದಾಗಿರುವ ರಚಿತಾ ಇಂತಹ ಚಿತ್ರದಲ್ಲಿ ನಟಿಸುವುದು ನನಗೆ ಮಜಾ ಕೊಡುತ್ತದೆ ಎನ್ನುತ್ತಾರೆ ನಾಯಕಿ ಪ್ರಧಾನ ಚಿತ್ರದಲ್ಲಿ ನಟಿಸಿ, ನಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕು. ನನಗೆ ವೈಯಕ್ತಿಕವಾಗಿ ತುಂಬಾ ಇಷ್ಟವಾದ ಸಿನಿಮಾ “ಏಪ್ರಿಲ್ ಎನ್ನುವ ಸ್ಪಷ್ಟನೆ ಅವರದು.
ಏಪ್ರಿಲ್ ಸಿನೆಮಾದಲ್ಲಿ ತುಂಬಾ ಸಹಜವಾಗಿ ಕಾಣಿಸಿಕೊಳ್ಳುತ್ತಿದ್ದೇನೆ, ಇದೊಂದು ಥ್ರಿಲ್ಲರ್ ಸಿನಿಮಾವಾಗಿದ್ದು, ಬೇರೆಯವರ ಸಮಸ್ಯೆಗಳನ್ನು ಬಗೆಹರಿಸುವ ಮನೋವೈದ್ಯೆಯೊಬ್ಬರು ತಾವೇ ಸಮಸ್ಯೆಯಲ್ಲಿ ಸಿಕ್ಕಿಕೊಂಡರೆ ಏನಾಗುತ್ತದೆ ಎಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆ. ಉಪೇಂದ್ರ ನಾಯಕರಾಗಿರುವ”ಐ ಲವ್ ಯೂ’ ಚಿತ್ರದ ನಾಯಕಿಯಾಗಿರುವ ರಚಿತಾ ರಾಮ್ ಚಿತ್ರದಲ್ಲಿ ನಾನು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದೇನೆ ಹಿಂದೆ ಯಾವ ಚಿತ್ರದಲ್ಲೂ ಕಾಣಿಸಿಕೊಳ್ಳದಷ್ಟೂ ಬೋಲ್ಡ್ ಪಾತ್ರ ಅದು ಅದಕ್ಕೆ ಕಾರಣ ಕಥೆ ಈ ಸಿನಿಮಾ ತುಂಬಾ ಪ್ರಾಯೋಗಿಕವಾಗಿದೆ. ಎಲ್ಲವನ್ನು ನೇರಾನೇರ ಹೇಳುವ ಸಿನಿಮಾ ಎನ್ನುತ್ತಾರೆ.
ಐ ಲವ್ ಯೂ’ ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದೇನೆ. ಲವ್ ಬಗ್ಗೆ ಪ್ರಬಂಧ ಸಿದ್ದಪಡಿಸಲು ಹುಡುಕಾಟ ನಡೆಸುವಾಗ ಪರಿಚಯವಾಗುವ ಉಪೇಂದ್ರ ಅವರಿಗೆ ನಾನು ಲವ್ ಅಂದರೇನು ಎಂದು ಕೇಳಿದಾಗ ಅವರು ಸೆಕ್ಸ್ ಎನ್ನುತ್ತಾರೆ. ಅದು ಹೇಗೆ ಎಂಬುದನ್ನು ಅರ್ಥಮಾಡಿಸುತ್ತಾರೆ.
ನೇರವಾಗಿ ಸೆಕ್ಸ್ ಬಗ್ಗೆ ಪ್ರಸ್ತಾಪ ಮಾಡುವ ಬದಲು ಪ್ರೀತಿ ಮಾಡಿ ಆ ನಂತರ ಸೆಕ್ಸ್‌ನತ್ತ ವಾಲುತ್ತಾರೆ ಎಂದು ಅರ್ಥ ಮಾಡಿಸುತ್ತಾರೆ ಅವರು. ಆ ತರಹದ ಬೋಲ್ಡ್ ಆದ ಪಾತ್ರ. ಇಡೀ ಸಿನಿಮಾ ಹಾಗೇ ಸಾಗುತ್ತದೆ. ತೆಲುಗಿನ “ಅರ್ಜುನ್ ರೆಡ್ಡಿ’ ಶೈಲಿಯ ಸಿನಿಮಾವಿದು.ಅಲ್ಲಿ ದೃಶ್ಯಗಳ ಮೂಲಕ ಹೇಳಲಾಗಿತ್ತು. ಇಲ್ಲಿ ಸಂಭಾಷಣೆಗಳ ಮೂಲಕ ಹೇಳಲಾಗಿದೆ ಉಪೇಂದ್ರ ಪ್ರಾಕ್ಟಿಕಲ್ ಆಗಿರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ರಚಿತಾ ವಿವರಣೆ ನೀಡುತ್ತಾರೆ.

Leave a Comment