ಬೋರ್ಡೇ ಇರದ ಬಸ್ಸನು ಹತ್ತಿ ಬಂದ ಚೋಕರಿ

ತೆರೆ ಹೆಸರು ಅಲಿಸಾ ಅಸಲಿ ಹೆಸರು ಮೆಲಿಸ ಅಂದ್ರಾದೆ ವಿಶೇಷ ನೃತ್ಯಗಾತಿ ಮತ್ತು ನಟಿ. ತಾನು ಐಟಂ ಸಾಂಗ್ ಡಾನ್ಸರ್ ಎಂದು ಗರ್ವದಿಂದಲೇ ಹೇಳಿಕೊಳ್ಳುವ ಅಲಿಸಾ ನೇರವಂತಿಕೆ ಮತ್ತು ವೃತ್ತಿಪರತೆಯನ್ನು ಯಾರೇ ಆಗಲಿ ಮೆಚ್ಚಲೇಬೇಕು. ಇತ್ತೀಚೆಗೆ ನಡೆದ ಹನಿಹನಿ ಇಬ್ಬನಿ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಸಾದಾಸೀದಾ ಹುಡುಗಿಯಾಗಿ ಕಾಣಿಸಿಕೊಂಡರು.

* ಐಟಂ ಸಾಂಗ್ ಡಾನ್ಸರ್ ಅಂತ ನೇರವಾಗಿ   ಹೇಳಿಕೊಳ್ಳುತ್ತೀರ ಮುಜಗರ ಅನ್ಸೊಲ್ವಾ?   
ನಾವು ಮಾಡುವ ಕೆಲಸದ ಬಗ್ಗೆ ಹೆಮ್ಮೆ ಇರಲೇಬೇಕು ಅನ್ನೋಳು ನಾನು. ಹೀಗಿದ್ದೇ ನಾನು ದಕ್ಷಿಣ ಭಾರತ ಸಿನೆಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡ್ತಿರೋದು.
* ಮೊದಲ ಐಟಂ ಡಾನ್ಸ್ ಅಂತ ಮಾಡಿದ್ದು ಯಾವ ಚಿತ್ರಕ್ಕೆ?

   ಡಾನ್ಸ್‌ನ ವೃತ್ತಿಯಾಗಿ ತೆಗೆದುಕೊಳ್ಳಬೇಕೆನ್ನಿಸಿದ್ದು ಯಾಕೆ?
ಮಾಯಾವಿ ಚಿತ್ರದಲ್ಲಿ. ಐಟಂ ಡಾನ್ಸ್‌ನ ವೃತ್ತಿಯಾಗಿಸಿಕೊಳ್ಳಬೇಕಂತ ಅನಿಸಿದ್ದಲ್ಲ ಸಿನೆಮಾ ಇಂಡಸ್ಟ್ರಿಗೆ ಬರುವವರೆಗೆ ಕಾಲೇಜಿಗೆ ಹೋಗಿ ಮನೆಗೆ ಮರಳುವ ಎಲ್ಲಾ ಹುಡುಗಿಯರಂತೆ ಇದ್ದಿದ್ದು. ತುಂಬಾ ಚಿಕ್ಕವಯಸ್ಸಿನಿಂದ ಡಾನ್ಸ್ ಹುಚ್ಚಿತ್ತು ಆಗಿನಿಂದಲೇ ಕಲಿತಿದ್ದೆ ಮಂಗಳೂರಿನ ಎಕ್ಸೆಲೆನ್ಸಿ, ವೈಟ್‌ಲೈನ್, ಲೈಮ್‌ಲೈಟ್ ಮುಂತಾದ ತಂಡಗಳ ಜೊತೆ ಡಾನ್ಸ್ ಪ್ರದರ್ಶನ ನೀಡುವುದರ ಜೊತೆಗೆ ವಿವಿಧ ಶೈಲಿಯ ಡಾನ್ಸ್ ಕಲಿತಿದ್ದೆ. ಹೆಚ್.ಆರ್.ನಲ್ಲಿ ಡಿಗ್ರಿ ಮಾಡಿ ಬೆಂಗಳೂರಿಗೆ ಆಗಷ್ಟೇ ಬಂದಿದ್ದೆ ಮಾಡೆಲಿಂಗ್ ಮಾಡ್ತಿದ್ದೆ ಜೊತೆಗೆ ಕೆಲಸಕ್ಕೂ ಪ್ರಯತ್ನಿಸುತ್ತಿದ್ದೆ. ಆಗ ನನ್ನೊಬ್ಬ ಗೆಳತಿ ಸಿನೆಮಾದ ಐಟಂ ಸಾಂಗ್‌ಗೆ ಪ್ರಯತಿಸ್ತಿದ್ದೇವೆ ನಿನ್ನ ಫೊಟೋನೋ ಕಳಿಸ್ತೀವಿ  ಅಂತ್ಹೇಳಿ ಫೋಟೊ ಕಳಿಸಿದ್ಲು. ನನ್ಗೆ ಆಗ ಐಟಂ ಸಾಂಗ್ ಅರ್ಥವೂ ಗೊತ್ತಿರಲಿಲ್ಲ ನೋಡಿದ್ರೆ ನಾನು ಆಯ್ಕೆಯಾಗಿದ್ದೆ. ಅದೇ ನನ್ನ ಮೊದಲ ಡಾನ್ಸ್ ಆಯ್ತು.
* ಬಹುಭಾಷೆ ಚಿತ್ರಗಳಲ್ಲಿ ಡಾನ್ಸ್ ಮಾಡಿದ್ದೀರಲ್ವಾ?
ತಮಿಳು, ತೆಲುಗು, ಮಲೆಯಾಳಂ, ಉರ್ದು, ತುಳು, ಕೊಂಕಣಿ, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಮಾಡಿದ್ದೇನೆ. ತಮಿಳಿನ ಪಾದೈ ಕನ್ನಡದಲ್ಲಿ ಅಮಾನುಷ ತೆಲುಗು ಸ್ವರ್ಣ ಮಹಲ್, ಮತ್ತು ಕಾಡು ಮೇರೆ ಜಾಡು ಉರ್ದು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದೇನೆ.
* ಐಟಂ ಡಾನ್ಸ್ ಮಾಡುವುದನ್ನು ವೃತ್ತಿಯಾಗಿ ತೆಗೆದುಕೊಂಡಿರುವುದಕ್ಕೆ ಖುಷಿ ಇದೆಯಾ?
ಈ ಡಾನ್ಸ್ ಒಂದು ಕಲೆ ಎಲ್ಲರಿಗೂ ಒಲಿಯುವುದಿಲ್ಲ ನನ್ಗೆ ಒಲಿದಿರುವ ಖುಷಿ ಇದೆ. ಎಲ್ಲರೊ ಒಂದೊಂದರಲ್ಲಿ ಫೇಮಸ್ ಆದ್ರೆ ನಾನು ಐಟಂ ಸಾಂಗ್ ಡಾನ್ಸ್‌ನಲ್ಲಿ ಫೇಮಸ್ ಆಗಿದ್ದೀನಿ. ಇದರಲ್ಲೇ ಈಗ ಹೆಚ್ಚು ಬಿಜಿಯಾಗಿದ್ದೇನೆ.
* ಸಿನೆಮಾ ಇಂಡಸ್ಟ್ರಿಗೆ ಬಂದು ಎಷ್ಟು ವರ್ಷ ಆಯ್ತು? ಎಷ್ಟು ಡಾನ್ಸ್ ಮಾಡಿದ್ದೀರ? ಕನ್ನಡದಲ್ಲಿ ಇತ್ತೀಚೆಗೆ ಡಾನ್ಸ್   ಮಾಡಿರುವುದು?
ಆರು ವರ್ಷವಾಯ್ತು ಸುಮಾರು ಅರವತ್ತೆಂಟು ಡಾನ್ಸ್ ಆಗಿದೆ. ದರ್ಶನ್ ಸರ್ ಚಿತ್ರ ಚಕ್ರವರ್ತಿಯಲ್ಲಿ ಡಾನ್ಸ್ ಜೊತೆ ನಟಿಸಿಯೂ ಇದ್ದೇನೆ ಇದಕ್ಕೆ ಮೊದಲು ಸರ್ ಅವ್ರ ವಿರಾಟ್ ಚಿತ್ರದಲ್ಲೂ ಮಾಡಿದ್ದೆ. ಗಜಕೇಸರಿ ಚಿತ್ರದಲ್ಲಿ ಯಶ್ ಸರ್ ಜೊತೆ ನಟಿಸಿದ್ದೇನೆ.
* ನಟನೆ ಮತ್ತು ಡಾನ್ಸ್ ಯಾವುದು ಹೆಚ್ಚು ಇಷ್ಟವಾಗುತ್ತೆ?
ನಟನೆಯ ಜೊತೆಗೆ ಡಾನ್ಸ್ ಮಾಡ್ತಿದ್ದೇನೆ. ಐಟಂ ಸಾಂಗ್ ಡಾನ್ಸ್ ನನ್ನ ಬ್ರೆಡ್ ಬಟರ್ ಎಲ್ಲವೂ ಆಗಿದೆ ನನ್ಗೆ ಹೆಸರು ತಂದುಕೊಟ್ಟಿರುವ ಡಾನ್ಸ್‌ನ ಎಂದಿಗೂ ಬಿಟ್ಟುಕೊಡೋಲ್ಲ. ದೇವರು ಎಲ್ಲವನ್ನೂ ಉತ್ತಮವಾಗಿಯೇ ಯೋಜಿಸುತ್ತಾನಂತೆ ಹಾಗೆ ನಾನೂ ಈ ಡಾನ್ಸ್‌ನಲ್ಲಿ ಫೇಮಸ್ ಆಗುವುದಕ್ಕೇ ಸಿನೆಮಾಕ್ಕೆ ಬಂದಿದ್ದೇನೆ.
– ಕೆ.ಬಿ. ಪಂಕಜ

Leave a Comment