ಬೋನಿಗೆ ಬಿದ್ದ ಚಿರತೆ!

ತಿಪಟೂರು, . ೨- ಅಂತೂ ಇಂತೂ ಜನ-ಜಾನುವಾರುಗಳಿಗೆ ತೀವ್ರ ಕಾಟ ನೀಡುತ್ತಿದ್ದ ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ತಾಲ್ಲೂಕಿನ ಮೀಸತಿಮ್ಮನಹಳ್ಳಿ ಕಲ್ಕೆರೆ ಬಳಿ ಇಂದು ನಡೆದಿದೆ.
ಬಹಳ ದಿನಗಳಿಂದ ಹೊನ್ನವಳ್ಳಿ ಹೋಬಳಿಯ ಮೀಸತಿಮ್ಮನಹಳ್ಳಿ ಕಲ್ಕೆರೆ ಭಾಗದಲ್ಲಿ ಚಿರತೆ ಹಾವಳಿ ಜಾಸ್ತಿಯಾಗಿತ್ತು. ಈ ಭಾಗದ ಸುತ್ತಮುತ್ತಲ ಹಳ್ಳಿಗಳ ಜನರಂತೂ ಈ ಚಿರತೆ ಹಾವಳಿಯಿಂದ ರೋಸಿ ಹೋಗಿದ್ದರು.
ಊರ ಹೊರಭಾಗಕ್ಕೆ ಬರುವ ಜನ-ಜಾನುವಾರುಗಳ ಮೇಲೆ ಈ ಚಿರತೆ ಆಗಿಂದಾಗ್ಗೆ ದಾಳಿ ನಡೆಸಿ ತೀವ್ರ ಭಯ ಭೀತರನ್ನಾಗಿಸಿತ್ತು. ಅಲ್ಲದೆ ಹಸು, ಕರು, ಕುರಿ, ಮೇರೆಗಳನ್ನು ಕೊಂದು ರೈತರಿಗೆ ತೀವ್ರ ನಷ್ಟ ಉಂಟು ಮಾಡುತ್ತಿತ್ತು.
ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನ ಸೆಳೆದಿದ್ದ ಈ ಭಾಗದ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಳೆದ ರಾತ್ರಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ.

Leave a Comment