ಬೈಲಹೊಂಗಲ ತಾಲ್ಲೂಕಿನಲ್ಲಿ ಎರಡು ವಾಹನಗಳ ನಡುವೆ ಡಿಕ್ಕಿ: ಮೂವರು ಸಾವು, ನಾಲ್ವರಿಗೆ ಗಾಯ

ಬೆಳಗಾವಿ, ಜ 18- ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸೋಮನಟ್ಟಿ ಕ್ರಾಸ್ ಬಳಿ ಟ್ರಕ್ ಮತ್ತು ಟೆಂಪೊ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಮೂರು ಜನರು ಮೃತಪಟ್ಟು ಇತರ ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ಅಪಘಾತ ಸಂಭವಿಸಿದ್ದು, ಮರಳು ತುಂಬಿದ್ದ ಟ್ರಕ್‍ವೊಂದು ಟೆಂಪೊಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೆಳಗಾವಿಗೆ ಸಾಗುತ್ತಿದ್ದ ಟೆಂಪೊನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಬೈಲಹೊಂಗಲ ತಾಲ್ಲೂಕಿನ ಸೋಮನಟ್ಟಿಯ ನಿವಾಸಿ ಫಕೀರಪ್ಪ ತುಳಜನವರ್(42), ಗೋಕಾಕ ತಾಲ್ಲೂಕಿನ ಅಂಕಳಗಿ ನಿವಾಸಿಗಳಾದ ಲಕ್ಷ್ಮಿ ಗುಡ್ ಗೋಳಿ(35) ಮತ್ತು ಆಕೆಯ ಮಗ ಕುಮಾರ್ (8) ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಪಘಾತ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Leave a Comment