ಬೈಕ್-ಸ್ಕೂಟರ್ ಡಿಕ್ಕಿ ಸವಾರ ಮೃತ್ಯು

ಉಡುಪಿ, ಅ.೨೧- ಬೈಕ್ ಮತ್ತು ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಎಂಜಿಎಂ ಕಾಲೇಜಿನ ಜಂಕ್ಷನ್ ಬಳಿ ನಡೆದಿದೆ. ಮೃತರನ್ನು ಪರ್ಕಳ ನಿವಾಸಿ ಹರೀಶ್(೪೪) ಎಂದು ಗುರುತಿಸಲಾಗಿದೆ. ಸ್ಕೂಟರ್ ಸವಾರ ಚಿಟ್ಪಾಡಿಯ ನಟರಾಜ ಹಾಗೂ ಅವರ ಪತ್ನಿ ರಾಜಶ್ರೀ ಗಾಯಗೊಂಡಿದ್ದಾರೆ.

ಉಡುಪಿ ಎಂಜಿಎಂ ಜಂಕ್ಷನ್‌ನಿಂದ ಇಂದಿರಾನಗರದ ಕಡೆಗೆ ಹೋಗುತ್ತಿದ್ದ ಸ್ಕೂಟರ್‌ಗೆ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆಯಿತು. ಇದರಿಂದ ಬೈಕ್ ಸವಾರ ಹರೀಶ್ ಗಂಭೀರವಾಗಿ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ ವೇಳೆ ಮೃತಪಟ್ಟರೆಂದು ತಿಳಿದು ಬಂದಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment