ಬೈಕ್, ಸ್ಕಾರ್ಪಿಯೊ ನಡುವೆ ಡಿಕ್ಕಿ

ಮೂರು ಮಂದಿ ಸ್ಥಳದಲ್ಲೇ ಸಾವು
ಪಿರಿಯಾಪಟ್ಟಣ: ಮೇ.6- ಬೈಕ್ ಮತ್ತು ಮಹೇಂದ್ರ ಸ್ಕಾರ್ಪಿಯೊ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿ 3 ಜನ ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಕಿರನೆಲ್ಲಿ ಗೇಟ್ ಬಳಿ ಭಾನುವಾರ ಜರುಗಿದೆ.
ನಂಜನಗೂಡು ತಾಲ್ಲೂಕಿನ ಇಬ್ಜಾಲ ಗ್ರಾಮದ ಸೋಮೇಶ (23), ಪ್ರಕಾಶ (23) ಮತ್ತು ಮಹದೇವಸ್ವಾಮಿ (22) ಅಪಘಾತದಲ್ಲಿ ಮೃತಪಟ್ಟ ಯುವಕರು.
ಮದುವೆ, ಬೀಗರ ಔತಣ ಮತ್ತಿತರ ದೊಡ್ಡ ಸಮಾರಂಭಗಳಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಯುವಕರು ಭಾನುವಾರ ಸಹ ತಮ್ಮ ಗ್ರಾಮದಿಂದ ಅಡುಗೆ ಸಹಾಯಕ ಕೆಲಸ ಮಾಡಲು ಹುಣಸೂರು ಮಾರ್ಗವಾಗಿ ಅಪಾಚೆ ಬೈಕ್ನಸಲ್ಲಿ ಪಿರಿಯಾಪಟ್ಟಣಕ್ಕೆ ಬರುತ್ತಿದ್ದು ಭಾನುವಾರ ಮಧ್ಯಾಹ್ನ ಸುಮಾರು 3.30 ಗಂಟೆ ಸಮಯದಲ್ಲಿ ಕಿರನೆಲ್ಲಿ ಗೇಟ್ ಗ್ರಾಮದ ಬಳಿ ಎದುರಿನಿಂದ ಬರುತ್ತಿದ್ದ ಮಹೇಂದ್ರ ಸ್ಕಾರ್ಪಿಯೊ ವಾಹನಕ್ಕೆ ಡಿಕ್ಕಿ ಹೊಡೆದು ಮೂವರಿಗೂ ತಲೆಗೆ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಅಪಘಾತದವಾದ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಸಾರ್ಪಿಯೊ ವಾಹನ ಮುಂಭಾಗ ಪೂರ್ಣ ಜಖಂಗೊಂಡಿದೆ.
ಪಿರಿಯಾಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಮೃತರ ಸಂಬಂಧಿಕರಿಗೆ ಶವ ಹಸ್ತಾಂತರಿಸಲಾಯಿತು.
05ಪಿವೈಪಿ01:ಪಿರಿಯಾಪಟ್ಟಣ ತಾಲ್ಲೂಕಿನ ಕಿರನಲ್ಲಿ ಗೇಟ್ ಬಳಿ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ 3 ಜನರ ಶವವನ್ನು ಸಾರ್ವಜನಿಕ ಆಸ್ಪತ್ರೆಗೆ ಗೂಡ್ಸ್ ಆಟೋದಲ್ಲಿ ಸಾಗಿಸಲಾಯಿತು.
05ಪಿವೈಪಿ02: ಪಿರಿಯಾಪಟ್ಟಣ ತಾಲ್ಲೂಕಿನ ಕಿರನಲ್ಲಿ ಗೇಟ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಜಖಂಗೊಂಡಿರುವ ಸ್ಕಾರ್ಪಿಯೊ ವಾಹನ.

Leave a Comment