ಬೈಕ್ ನಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು

=

ಕಲಬುರಗಿ,ಜೂ.19-ಬೈಕ್ ನಿಂದ ಬಿದ್ದು ಗಾಯಗೊಂಡು ಸೇಡಂ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಸೇಡಂ ತಾಲ್ಲೂಕಿನ ಕುರಕುಂಟಾದ ಅಂಬಿಕಾ ಭೀಮಪ್ಪ ತಳವಾರ ಮೃತಪಟ್ಟ ಮಹಿಳೆ. ಸೇಡಂದಿಂದ ಪತಿ ಭೀಮಪ್ಪ ತಳವಾರ ಜೊತೆಗೆ ಅಳ್ಳೊಳ್ಳಿಗೆ ಬೈಕ್ ಮೇಲೆ ಹೋಗುತ್ತಿದ್ದಾಗ ಜಂಪಿನಲ್ಲಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ಸೇಡಂ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment