ಬೈಕ್-ಟೆಂಪೋ ಡಿಕ್ಕಿ: ಸವಾರ ಗಂಭೀರ
ಸುಳ್ಯ, ನ.೨೨– ಬೈಕ್ ಹಾಗೂ ಅಪೆ ಟೆಂಪೋ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಮೊಗರ್ಪಣೆ ಬಳಿ ನಿನ್ನೆ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರ ಜಾಲ್ಸೂರು ನಿವಾಸಿ ಜತಿನ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.