ಬೈಕ್ ಗಳಿಗೆ ಅಪರಿಚಿತ ವಾಹನ ಡಿಕ್ಕಿ

ಸ್ಥಳದಲ್ಲೇ ಇಬ್ಬರ ಸಾವು
ಪಿರಿಯಾಪಟ್ಟಣ: ಜು.18- ಎರಡು ಬೈಕ್ ಗಳಿಗೆ ಅಪರಿಚಿತ ವಾಹನ ಹಿಂಬಂದಿಯಿಂದ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಮೃತಪಟ್ಟು ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಬಸಲಾಪುರ ಗೇಟ್‍ ಬಳಿ ಬುಧವಾರ ರಾತ್ರಿ ಜರುಗಿದೆ.
ಪಟ್ಟಣದ ಪರಿವಾರ ಬೀದಿ ನಿವಾಸಿ ಕುಮಾರನಾಯಕ ಎಂಬುವವರ ಪುತ್ರ ಪ್ರಮೋದ್ (18) ಮತ್ತು ಹುಣಸೂರಿನ ಮಂಜುನಾಥ ಬಡಾವಣೆಯ ರಾಜಣ್ಣ ಎಂಬುವವರ ಪುತ್ರ ದರ್ಶನ್ (20) ಅಪಘಾತದಲ್ಲಿ ಮೃತಪಟ್ಟಿರುವವರು.
ತಾಲ್ಲೂಕಿನ ಬಸಲಾಪುರ ಗೇಟ್ ಬಳಿ ಇರುವ ಕಾಲ ಭೈರವೇಶ್ವಪರ ಪೆಟ್ರೋಲ್ ಬಂಕ್ ಬಳಿ ಪ್ರಮೋದ್, ವಿಕಾಸ್, ವಿನಯ್ ತಮ್ಮ ಸ್ನೇಹಿತನ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಂಪಲಾಪುರ ಗ್ರಾಮಕ್ಕೆ ಬೈಕ್ನ ಲ್ಲಿ ತೆರಳುತ್ತಿದ್ದರು ಹಾಗೆ ಹುಣಸೂರಿನ ದರ್ಶನ್ ಸಹ ಪಿರಿಯಾಪಟ್ಟಣದಿಂದ ಹುಣಸೂರಿಗೆ ಹಿಂತಿರುಗುತ್ತಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಅಪರಿಚಿತ ವಾಹನ ಎರಡೂ ಬೈಕ್ಗಭಳಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ವಿಕಾಸ್, ವಿನಯ್‍ ಎಂಬುವವರು ಗಂಭೀರವಾಗಿ ಗಾಯಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಮೈಸೂರಿಗೆ ಸಾಗಿಸಲಾಯಿತು.
ಸಾರ್ವಜನಿಕ ಆಸ್ಪತ್ರೆಗೆ ಸಿಪಿಐ ಪ್ರದೀಪ್‍ ಕುಮಾರ್, ಪಿಎಸ್ಐ ಗಣೇಶ್ ಆಗಮಿಸಿ ಘಟನೆಯ ಕುರಿತು ವಿವರ ಪಡೆದರು.
17ಪಿವೈಪಿ03:ಪಿರಿಯಾಪಟ್ಟಣ ತಾಲ್ಲೂಕಿನ ಬಸಲಾಪುರ ಗೇಟ್‍ ಬಳಿ ಬುಧವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆಂದು ಮೈಸೂರಿಗೆ ಸಾಗಿಸಲಾಯಿತು.

Leave a Comment