ಬೈಕ್ ಕಳ್ಳರ ಬಂಧನ: 6 ಬೈಕ್ ಜಪ್ತಿ

 

ಕಲಬುರಗಿ ಜು 17: ನಗರದ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಮೂವರು ಬೈಕ್ ಕಳ್ಳರನ್ನು ಬಂಧಿಸಿ, ಅವರಿಂದ 6 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಅಭಿನಂದನ್,ಕುಮಾರ,ರಾಕೇಶ್ ಎಂಬುವವರೇ ಬಂಧಿತ ಬೈಕ್ ಕಳ್ಳರು.ಇವರಿಂದ ವಶಪಡಿಸಿಕೊಂಡ ಬೈಕುಗಳ ಅಂದಾಜು ಮೌಲ್ಯ 2 ಲಕ್ಷ ರೂಪಾಯಿ ಎಂದು ಪೋಲಿಸರು ತಿಳಿಸಿದ್ದಾರೆ.

ಡಿಸಿಪಿ ಕಿಶೋರ್ ಬಾಬು ಅವರ ಮಾರ್ಗದರ್ಶನದಲ್ಲಿ ಗ್ರಾಮೀಣ ಪಿಐ ಸಂಜೀವ,ಪಿಎಸೈ ಚಂದ್ರಶೇಖರ ತಿಗಡಿ ಮತ್ತು ಸಿಬ್ಬಂದಿಗಳು ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..

Leave a Comment