ಬೈಕ್‍ಗಳಿಗೆ ಬೆಂಕಿಹಚ್ಚಿದ ದುಷ್ಕರ್ಮಿಗಳು

ಶಿವಮೊಗ್ಗ.ಫೆ.12; ಬೈಕ್ ಗಳಿಗೆ ಬೆಂಕಿ ಹಚ್ಚುವ ಮೂಲಕ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ.
ಶಿವಮೊಗ್ಗದ ನ್ಯೂ ಮಂಡಳಿ ಮೊದಲನೇ ತಿರುವಿನ ಬಳಿಯಲ್ಲಿರುವ ಮನೆಗಳ ಮುಂದೆ ನಿಲ್ಲಿಸಲಾಗಿದ್ದ ಆರು ಬೈಕ್ ಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ಆರಿಸಿದ್ದಾರೆ. ಆದರೆ ಬೆಂಕಿಗೆ ಬೈಕ್‍ಗಳು ಸುಟ್ಟುಹೋಗಿವೆ. ನಾಗರಾಜ್, ರೇಣುಕೇಶ್, ಯೋಗೀಶ್ ಮೊದಲಾದ ಮೂವರ ಬೈಕ್‍ಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿರುವುದು ತಿಳಿದುಬಂದಿದೆ.

Leave a Comment