ಬೈಕ್‌ನಿಂದ ಬಿದ್ದು ನಟ ಅಜಿತ್‌ಗೆ ಗಾಯ

ಚೆನ್ನೈ, ಫೆ 19- ಸಾಹಸ ಚಿತ್ರೀಕರಣದ ವೇಳೆ ಬೈಕ್‌ನಿಂದ ಬಿದ್ದು ಕಾಲಿವುಡ್‌ನ ಸ್ಟಾರ್ ನಟ ತಲಾ ಅಜಿತ್ ಅವರು ಪೆಟ್ಟು ಮಾಡಿಕೊಂಡಿದ್ದು, ಅಭಿಮಾನಿಗಳು ಆತಂಕಗೊಂಡಿದ್ದಾರೆ.

ತಮಿಳು ಚಿತ್ರರಂಗದ ಸ್ಟಾರ್ ನಟ ಹಿಟ್ ಚಿತ್ರಗಳನ್ನು ನೀಡಿರುವ ತಲಾ ಅಜಿತ್ ಗೆ ಬೈಕ್ ಅಪಘಾತವಾಗಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟ ಬೇಗನೆ ಗುಣಉಖರಾಗುವಂತೆ ಪ್ರಾರ್ಥಿಸುತ್ತಿದ್ದಾರೆ. ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಎಚ್. ವಿನೋದ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದ ಶೂಟಿಂಗ್ ವೇಳೆ ಅಜಿತ್ ಗೆ ಅಪಘಾತ ಸಂಭವಿಸಿದೆ. ಚೆನ್ನೈನಲ್ಲಿ ನಡೆಯುತ್ತಿದ್ದ ಸಾಹಸ ಸನ್ನಿವೇಶದ ಚಿತ್ರೀಕರಣದ ಸಂದರ್ಭದಲ್ಲಿ ಅಜಿತ್ ಓಡಿಸುತ್ತಿದ್ದ ಬೈಕ್ ಸ್ಕಿಡ್ ಆಗಿದ್ದರಿಂದ ಅವರು ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.

ಬೈಕ್‌ನಿಂದ ಬಿದ್ದ ಅಜಿತ್‌ಗೆ ಸಣ್ಣಪುಟ ಗಾಯಗಳಾಗಿದ್ದು, ವೈದ್ಯರು ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಈ ಸುದ್ದಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಅಜಿತ್ ಬೇಗ ಗುಣಮುಖವಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ #ಉeಣWeಟಟSooಟಿಖಿಊಂಐಂ ಎಂಬ ಹ್ಯಾಷ್‌ಟ್ಯಾಗ್ ಮೂಲಕ ಅವರಿಗಾಗಿ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ.

Leave a Comment