ಬೈಕ್‌ಗೆ ಬಸ್ ಡಿಕ್ಕಿ: ಯುವತಿ ಸಾವು

ಮಧುಗಿರಿ, ಫೆ. ೧೫- ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಯುವಕನೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಡಿ.ವಿ.ಹಳ್ಳಿ ಬಳಿ ಇಂದು ಬೆಳಿಗ್ಗೆ 10.30 ರಲ್ಲಿ ನಡೆದಿದೆ.

ಮೃತಪಟ್ಟಿರುವ ಯುವತಿ ತಾಲ್ಲೂಕಿನ ಬೆಂಕಿಪುರದ ವಾಸಿಯಾಗಿದ್ದು, ಹೆಸರು ತಿಳಿದು ಬಂದಿಲ್ಲ. ತೀವ್ರವಾಗಿ ಗಾಯಗೊಂಡಿರುವ ಬೈಕ್ ಚಾಲನೆ ಮಾಡುತ್ತಿದ್ದ ಯುವಕ ಕಿಶೋರ್ (20) ಎಂಬುವರಿಗೆ ಕೈ, ಕಾಲು ಮುರಿದ್ದು, ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಇವರು ಬೆಂಕಿಪುರದಿಂದ ಕಾಲೇಜಿಗೆ ಹೋಗುವ ಸಲುವಾಗಿ ದ್ವಿಚಕ್ರ ವಾಹನದಲ್ಲಿ ಮಧುಗಿರಿ ಕಡೆಯಿಂದ ಸಿರಾ ಕಡೆಗೆ ತೆರಳುತ್ತಿದ್ದರು. ಇದೇ ವೇಳೆ ಸಿರಾ ಕಡೆಯಿಂದ ಮಧುಗಿರಿ ಕಡೆಗೆ ಅತಿ ವೇಗವಾಗಿ ಬಂದಿರುವ ಖಾಸಗಿ ಬಸ್ ಮುಖಾಮುಖಿಯಾಗಿ ಬೈಕ್‌ಗೆ ಅಪ್ಪಳಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

ಈ ಸಂಬಂಧ ಮಧುಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Leave a Comment