ಬೇಸಿಗೆಯಲ್ಲಿ ಫ್ರಿಡ್ಜ್‌ನಲ್ಲಿಟ್ಟ ನೀರು ಕುಡಿಯಬಾರದು, ಏಕೆ

 
ಬೇಸಿಗೆಯಲ್ಲಿ ಮನೆಯೊಳಕ್ಕೆ ಬಂದಾಗ ನೀವು ಮಾಡುವ ಮೊದಲ ಕೆಲಸವೆಂದರೆ ಫ್ರಿಜ್ಜಿನಲ್ಲಿಟ್ಟ ಶೀತಲ ನೀರನ್ನು ಗಟಗಟ ಕುಡಿಯುವುದು ಇದರಿಂದ ಬೇಸಿಗೆಯ ಬೇಗೆಯಲ್ಲಿ ಬೆಂದಿದ್ದ ನಿಮ್ಮ ದೇಹ ತಕ್ಷಣವೇ ತಣಿದು ನಿಮಗೆ ಆರಾಮವೆನಿಸುತ್ತದೆ. ಬಿಸಿ ಹೆಚ್ಚುತ್ತಿದ್ದಷ್ಟೂ ಫ್ರಿಜ್ಜಿನ ನೀರಿಗೆ ಹೆಚ್ಚು ಹೆಚ್ಚು ಬೇಡಿಕೆ ಕುದುರುತ್ತದೆ ಹಾಗೂ ಕುಡಿಯುವ ಇತರ ಪೇಯಗಳಲ್ಲಿಯೂ ಮಂಜುಗಡ್ಡೆಯ ತುಂಡುಗಳನ್ನು ಹಾಕಿಯೇ ಕುಡಿಯುವುದು ಅವ್ಯಾಹತವಾಗುತ್ತದೆ. ಶೀತಲ ನೀರು ಬಿಸಿಲ ಬೇಗೆಯನ್ನು ತಣಿಸುವುದೇನೋ ಸರಿ, ಆದರೆ ಇದು ನಿಮ್ಮ ಜೀರ್ಣಾಂಗಗಳಿಗೆ ಆರೋಗ್ಯಕರವೇ?
ವಾಸ್ತವದಲ್ಲಿ, ಬಿಸಿಲ ಬೇಗೆಯಿಂದ ನಮ್ಮ ತ್ವಚೆಗೇ ಹೆಚ್ಚು ತೊಂದರೆಯೇ ಹೊರತು ನಮ್ಮ ಜೀರ್ಣಾಂಗಗಳಿಗೆ ಅಲ್ಲ. ಹಾಗಾಗಿ ಸೆಖೆಯನ್ನು ತಣಿಸಲು ಶೀತಲ ನೀರನ್ನು ಕುಡಿಯುವುದರಿಂದ ಜೀರ್ಣಾಂಗಗಳಿಗೆ ನಾವು ತೊಂದರೆಯನ್ನು ಮಾಡುತ್ತಿದ್ದೇವೆ ಎಂಬದು ನಿಮಗೆ ಗೊತ್ತೇ. ಅಲ್ಲದೇ ನಾವು ಸೇವಿಸುವ ಆಹಾರ ತಣ್ಣಗಿದ್ದಷ್ಟೂ ಇದರ ದುಷ್ಪರಿಣಾಮಗಳು ಜೀರ್ಣಾಂಗಗಳಿಗೆ ಮೇಲೆ ಆಗುವ ಸಾಧ್ಯತೆ ಹೆಚ್ಚು. ಸೆಖೆ ಭಾರತಕ್ಕೆ ಇಂದು ನಿನ್ನೆ ಬಂದಿದ್ದೇನೂ ಅಲ್ಲ, ಸಾವಿರಾರು ವರ್ಷಗಳಿಂದಲೂ ಇದೆ. ಆದರೆ ಆಯುರ್ವೇದ ಈ ತೊಂದರೆಯಿಂದ ಪರಿಹಾರ ಪಡೆಯಲು ಎಂದಿಗೂ ತಣ್ಣನೆಯ ನೀರನ್ನು ಕುಡಿಯುವಂತೆ ಹೇಳಿಲ್ಲ.
ಅತಿ ಶೀತಲ ನೀರನ್ನು ಊಟದ ಸಮಯದಲ್ಲಿಯೇ ಆಗಲಿ ಇತರ ಸಮಯದಲ್ಲಿಯೇ ಆಗಲಿ ಕುಡಿಯುವ ಮೂಲಕ ನೈಸರ್ಗಿಕ ಜೀರ್ಣಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಜೀರ್ಣರಸಗಳ ಪ್ರಭಾವವನ್ನು ಕುಂದಿಸುತ್ತದೆ ಮತ್ತು ಈ ಮೂಲಕ ದೋಶಗಳ ಸಮತೋಲನವನ್ನು ಏರುಪೇರುಗೊಳಿಸುತ್ತದೆ”. ಹಾಗಾಗಿ ಊಟದ ಸಮಯದಲ್ಲಿ ಶೀತಲ ನೀರು ಅಥವ ಇತರ ರಸಗಳನ್ನು ಸೇವಿಸಬಾರದು. ಇದರ ಬದಲಿಗೆ ಆಹಾರ ಬಾಯಿಯಲ್ಲಿದ್ದಾಗಲೇ ಉಗುರುಬೆಚ್ಚನೆಯ ನೀರನ್ನು ಕುಡಿಯಬೇಕು ಎಂದು ಆಯುರ್ವೇದ ಸೂಚಿಸುತ್ತದೆ.
. ಶೀತಲ ನೀರನ್ನು ಕುಡಿದಾಗ ಅಥವಾ ಶೀತಲ ಆಹಾರ ಸೇವಿಸಿದಾಗ ಈ ತಂಪುತನ ದೇಹದ ತಾಪಮಾನವನ್ನು ಕಸಿದುಕೊಳ್ಳುತ್ತದೆ ಹಾಗೂ ಇದನ್ನು ಸರಿಪಡಿಸಲು ದೇಹಕ್ಕೆ ಹೆಚ್ಚಿನ ಉಷ್ಣತೆಯನ್ನು ಉತ್ಪಾದಿಸಬೇಕಾಗಿ ಬರುತ್ತದೆ. ಅಂದರೆ ನಿಜವಾಗಿ ಜೀರ್ಣಕ್ರಿಯೆಗೆ ಬಳಕೆಯಾಗಬೇಕಾಗಿದ್ದ ಶಕ್ತಿ ಹೀಗೆ ಪೋಲಾಗಿ ಹೋಗುತ್ತದೆ. ಹಾಗಾಗಿ ಜೀರ್ಣಕ್ರಿಯೆಯ ಮೂಲಕ ಪಡೆಯಬೇಕಾಗಿದ್ದ ಪೋಷಕಾಂಶಗಳು ದೇಹಕ್ಕೆ ಪೂರ್ಣಪ್ರಮಾಣದಲ್ಲಿ ದೊರಕದೇ ಹೋಗುತ್ತವೆ. ಇದೇ ಕಾರಣಕ್ಕೆ ಆಹಾರ ಸೇವನೆಯ ಸಮಯದಲ್ಲಿ ಸಾದಾ ನೀರನ್ನು ಕುಡಿಯುವುದೇ ಉತ್ತಮ.
ನಿಮ್ಮ ಹಿರಿಯರು ನಿಮಗೆ ತಣ್ಣನೆಯ ನೀರನ್ನು ಕುಡಿಯದಿರುವಂತೆ ತಡೆಯುತ್ತಿದ್ದುದು ಎಂದರೆ ತಕ್ಷಣವೇ ಎದುರಾಗುವ ಗಂಟಲ ಬೇನೆ ಮತ್ತು ಇತರ ತೊಂದರೆಗಳಾಗಿವೆ. ಕಟ್ಟುವ ಮೂಗು, ಗಂಟಲ ಕೆರೆತ, ಕಫ, ಸೀನುವಿಕೆ, ಸೋರುವ ಮೂಗು, ಕಟ್ಟಿಕೊಳ್ಳುವ ಮೂಗು ಮೊದಲಾದ ಎಲ್ಲಾ ತೊಂದರೆಗಳು ಎದುರಾಗಬಹುದು. ಅದರಲ್ಲೂ ಊಟದ ಬಳಿಕ ಸೇವಿಸುವ ತಣ್ಣನೆಯ ನೀರು ಗಂಟಲ ಭಾಗದಲ್ಲಿ ಕಫ ಉಂಟಾಗುವಂತೆ ಮಾಡುತ್ತದೆ
ಊಟದ ಬಳಿಕ ತಣ್ಣನೆಯ ನೀರನ್ನು ಕುಡಿಯುವುದರಿಂದ ಇದರ ತಂಪುತನ ಆಹಾರದಲ್ಲಿರುವ ಕೊಬ್ಬುಗಳನ್ನು ಘನೀಕರಿಸುತ್ತದೆ ಹಾಗೂ ಇದನ್ನು ಒಡೆಯುವುದನ್ನು ತುಂಬ ಕಷ್ಟಕರವಾಗಿಸುತ್ತದೆ. ಆಯುರ್ವೇದ ಊಟದ ತಕ್ಷಣವೇ ನೀರು ಕುಡಿಯಬಾರದು ಎಂದು ತಿಳಿಸುತ್ತದೆ. ಊಟದ ಅರ್ಧ ಘಂಟೆಯ ಬಳಿಕವೇ ನೀರು ಕುಡಿಯಿರಿ
ಹೃದಯದ ಬಡಿತದ ಗತಿಯನ್ನು ತಗ್ಗಿಸಬಹುದು ಕೆಲವು ಅಧ್ಯಯನಗಳ ಪ್ರಕಾರ, ತಣ್ಣೀರು ಸೇವನೆಯಿಂದ ಹೃದಯದ ಬಡಿತದ ಗತಿ ತಗ್ಗಬಹುದು. ಅದರಲ್ಲೂ ಅತಿ ಶೀತಲ ಮತ್ತು ಮಂಜುಗಡ್ಡೆ ಬೆರೆಸಿದ ನೀರನ್ನು ಕುಡಿಯುವುದರಿಂಡ ನಮ್ಮ ದೇಹದ ಹತ್ತನೆಯ ನರವೆಂದು ಪರಿಗಣಿಸಲಾಗುವ ವೇಗಸ್ ನರಕ್ಕೆ ಪ್ರಚೋದನೆ ದೊರಕುತ್ತದೆ. ಇದು ನಮ್ಮ ನರವ್ಯವಸ್ಥೆಯ ಅತಿ ಮುಖ್ಯ ನರವಾಗಿದ್ದು ತಕ್ಷಣವೇ ಹೃದಯದ ಬಡಿತದ ಗತಿಯನ್ನು ಇಳಿಸುತ್ತದೆ. ಇದೇ ಕಾರಣಕ್ಕೆ ಅತಿ ಶೀತಲ ನೀರು ಮತ್ತು ಆಹಾರವನ್ನು ಸೇವಿಸಿದ ತಕ್ಷಣ ಹೃದಯದ ಬಡಿತದ ಗತಿ ಇಳಿಮುಖವಾಗುತ್ತದೆ. ಇದು ಆರೋಗ್ಯದ ಮೇಲೆ ಹಲವು ರೀತಿಯಿಂದ ಪ್ರಭಾವ ಬೀರಬಹುದು

Leave a Comment